ಶುಭಾ. ಎ. ಆರ್
ಕತ್ತಲೆದುಂಬಿದ ಹಾದಿಗಳ ಸವೆಸಿದಾಗ
ಪಟಪಟಿಸಿದ ರೆಕ್ಕೆ ಸದ್ದಿಗೆ
ಬೆಚ್ಚಿ ಕಣ್ಮುಚ್ಚಿದ ಹೊತ್ತು
ಎಲ್ಲೋ ಮಿನುಗುವ
ದೀಪ ಉಲಿಯುತ್ತದೆ
ನಾನಿರುವೆ.
ಯಾರಿಗೆ ಗೊತ್ತಿಲ್ಲ
ದೂರದ ಬೆಟ್ಟ ನುಣ್ಣಗೆ,
ಕಲ್ಲು ಮುಳ್ಳುಗಳ ಹಾಯ್ದು
ಕುರುಚಲು ಪೊದೆಗಳ ತರಿದು
ನೆತ್ತರು ಬಸಿವ ಪಾದವೂರಿದಾಗ
ಶಿಖರವೂ ತಲೆ ಬಾಗುತ್ತದೆ.
ಮರಳುಗಾಡಿನಲೊಮ್ಮೆ
ತಳಿರು ತೋಟದಲೊಮ್ಮೆ
ಮಾಗಿ ಸಾಗುವ ಹೆಜ್ಜೆಗಳು
ಭಾರ ಹಗುರಗಳನ್ನು ಕಲಿತ ಭಾವ
ಹುರಿದುಂಬಿಸುತ್ತವೆ ಪ್ರತಿ
ಮುಳ್ಳು ಹೂಬೇಲಿಗಳ ದಾಟು
ಬದುಕಿಗಾಗಿ ಹೂಡು
ಮತ್ತೊಂದು
ಭಗೀರಥ ಯತ್ನ.





0 Comments