ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನೆಲದ ನಿಯಮಗಳು ಒರೆಸಿಹೋಗುತ್ತವೆ!’ – ರೂಪಾ

ಒರೆಸಿಹೋಗುತ್ತವೆ

ರೂಪಾ ಹಾಸನ್


ಉಸಿರು ತುಂಬಿದ
ಕ್ಷಣದಿಂದ
ಯಾಚನೆಗೊಡ್ಡಿದ
ಅನಾಥ ಬೊಗಸೆ
ಬಿಕ್ಕಳಿಸುತ್ತಲೇ ಇರುವ
ಆರ್ತನಾದ.
 
ಕೊಚ್ಚಿ ಬಂದ ಮಹಾಪೂರ
ತುಂಬಿಟ್ಟುಕೊಳಲಾಗದೇ
ಬರಿದೇ ಮುಳುಗಿ
ಮೀಯುವ ಸಂಭ್ರಮ
 
ಉಕ್ಕುವ ನೀರಿನಲ್ಲೂ
ಕರಗಿಸುವ ಆದ್ರತೆ!
ಆ ಸೆಳೆತಕ್ಕೆ
ಪುಟ್ಟ ಬೊಗಸೆಯೇ ಕರಗಿ
ಉಕ್ಕೇರುವ ಪ್ರವಾಹದೊಡಲು ಸೇರಿ
ರುದ್ರ ನರ್ತನವಾಡುತ್ತಿರುವ
ಅದರ ಪ್ರತಿ
ನೀರಹನಿಯ ಮೇಲೂ
ತನ್ನ ಯಾತನೆಯ
ಕಣ್ಣ ಹನಿಗಳ
ಸಹಿಯನೂರುತ್ತದೆ.
 
ಭೋರ್ಗರೆದ ಅಗಾಧ ನೀರು
ಮಗುವಿನಂತೆ ತಣ್ಣಗೆ
ಮಲಗಿ ನಿದ್ರಿಸುತ್ತದೆ.
 
ನೆಲದ ನಿಯಮಗಳು
ಒರೆಸಿಹೋಗುತ್ತವೆ!
 

‍ಲೇಖಕರು avadhi

28 June, 2013

11 Comments

  1. G Venkatesha

    Prakruti Vikopakke yaaru HoNe??? AnandisoNa, AaraadisoNA E Prakrutiyanna. AnubhavisoNa Adara Atotavannu.

  2. nagraj.harapanahalli

    ರೂಪಕಗಳನ್ನ ಕಟ್ಟಿಕೊಟ್ಟ ಮೇಲೆ ಕವಿಯ ಕೆಲಸ ಮುಗಿಯಿತು. ವಿಮರ್ಶಕರು ಏನಿದು ಎಂದು ಹುಡುಕಲು ತಿಣುಕಬೇಕು

  3. Vijendra

    Prukrutiya ashayagalu mereyuttave!!

  4. gururaj katriguppe

    ಕೊಚ್ಚಿ ಬಂದ ಮಹಾಪೂರ
    ತುಂಬಿಟ್ಟುಕೊಳಲಾಗದೇ
    ಬರಿದೇ ಮುಳುಗಿ
    ಮೀಯುವ ಸಂಭ್ರಮ
    Thumba istavada salugalu, mathe,mathe, odhidaga bere bere arthagalannu ‘ukkisaballa’ kavithe, thumba gambhiravada kavithe, ondhistu ‘sarala’vagiddalli, kavitheya gambiryakke enu dhakkeyaguvudilla embudu kevala ‘nanna’ bhavane. kavithe kottiddakke thumba thanx.

  5. ಲಿಂಗರಾಜು ಬಿ.ಎಸ್.

    ನೆಲದ ನಿಯಮಗಳನ್ನು ಒರೆಸಿ ಹಾಕುವುದು, ಮತ್ತೆ ನಿಯಮಗಳನ್ನು ಹೇರುವುದು ಒಂದು ಲಾಭದಾಯಕ ಉದ್ಯಮ. ಬೇಸಗೆಯಲ್ಲಿ ಮನೆ ಮೇಲೆ ಹತ್ತಿ ಹೆಂಚು ಒಡೆದು ಮಳೆಯಲ್ಲಿ ಸೋರುವುದನ್ನು ತಡೆಯಲು ರಿಪೇರಿ ಮಾಡುವ ರೀತಿ. ಇಲ್ಲಿ ಒಂದು ಗೊತ್ತಿಲ್ಲದೆ ನಡೆಯುವುದು, ಇನ್ನೊಂದು ಗೊತ್ತಾಗದ ರೀತಿ ಮಾಡುವುದು.
    ಕೊನೆಗೆ
    ಉಸಿರು ತುಂಬಿದ
    ಕ್ಷಣದಿಂದ
    ಯಾಚನೆಗೊಡ್ಡಿದ
    ಅನಾಥ ಬೊಗಸೆ
    ಬಿಕ್ಕಳಿಸುತ್ತಲೇ ಇರುವ
    ಆರ್ತನಾದ.

  6. RAVIKUMAR B T

    Prakrutiya munde naaveshtu chikkavarendu tiliyade…. uttarakhandada udaaharaneyonde saalade .. .?
    ishtavaada saalugalu

  7. SALEEM HASSAN

    Nelada niyamagalu oresihoguttive…..kaarana yaru…..?

  8. ರೂಪ ಹಾಸನ

    ಎಲ್ಲರಿಗೂ ಧನ್ಯವಾದಗಳು. ಒಂದು ಕವಿತೆ ಎಷ್ಟೊಂದು ವಿಭಿನ್ನ ಅಥಱಗಳನ್ನು ಹೊಳೆಯಿಸಬಲ್ಲದು!

    • Anonymous

      Arthavu antaraaladalli moodi mareyaagadantirabeku…. manassaamrajyadalli aalvike nadesi swastaanavannu kaapaadikolluvanthirabeku….

  9. Ahalya Ballal

    ತುಂಬ ಕುತೂಹಲಕಾರಿಯಾಗಿದೆ. ಮತ್ತೆ ಮತ್ತೆ ಓದು ಮರುಳೇ ಎನ್ನುವಂತಿದೆ :):)

  10. Saleem Hassan

    Maatrushree Swarooparige,
    Mattondu sundara kaviteya nireeksheyalli……..
    Saleem

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading