-ಕಾರ್ತಿಕ್ ಭಟ್ ಬಳಗುಳಿ
ಅಪ್ಪಳಿಸಿ ಬರುತ್ತಿವೆ ನೆನಪಿನ ಬುತ್ತಿ
ಅಲೆಗಳು ಬಂದ ಹಾಗೆ
ಖಾಲಿಯಾಗದ ಅಕ್ಷಯ ಪಾತ್ರೆಯ ಹಾಗೆ
ಒಂದಾದ ಮೇಲೊಂದರಂತೆ…
ಗಾಳಿಯು ಜೋರಾಗಿ ಬೀಸುತ್ತಾ ಬರುತ್ತಲಿರುವಂತೆ
ತರಗೆಲೆಗಳು ಉದುರಿದಂತೆ
ನೆನಪಿನ ಮೆರವಣಿಗೆ ಮುಗಿಯುವ ಹಾಗೆ
ಕಾಣುತ್ತಿಲ್ಲ…
ಮುಗಿಯದ ಮುಂಗಾರು ಮಳೆಯಂತೆ
ಆಗಾಗ ಜಿನುಗುತಿಹುದು
ಮಳೆ ಹೊಯ್ದು ಇಳೆ ತಂಪಾಗಿಸಿದಂತೆ
ಕಣ್ಣನ್ನು ತಂಪಾಗಿಸುತಲಿಹುದು
ಜಲಪಾತ ಧುಮ್ಮಿಕ್ಕಿ ಬರುತ್ತಿರುವ ಹಾಗೆ
ನೆನಪಿನ ಜೋಳಿಗೆ ಉಕ್ಕುತ್ತಿಹುದೂ
ಎಂದು ಬಾಡದ ಕಮಲದ ಹೂವಿನ ಹಾಗೆ
ಮತ್ತೆ ಮತ್ತೇ ನೆನಪಾಗುತಿಹುದು
ಒಂದು ಪುಟವನು ತೆರೆದು ನೋಡುತ್ತಲಿರುವಂತೆ
ಇನ್ನೊಂದು ಪುಟ ಬರುತಲಿಹುದು
ನೆನಪಿನ ಜೋಳಿಗೆಯ ಹಿಡಿದು ಹೊರಟರೆ
ಎಲ್ಲಿ ಹೋಗಿ ಬೇಕಾದರೂ ತಲುಪಬಹುದು
ಸಾಗಿದ ದಾರಿಯ ಅರಿವಿಲ್ಲ…
ಸಾಗಬೇಕಾದ ದಾರಿಯು ಒಮ್ಮೊಮ್ಮೆ ಕಾಣುವುದಿಲ್ಲ
ದಾರಿ ಮದ್ಯ ಕತ್ತಲು ಆವರಿಸಿಬಿಡಬಹುದು…
ನೆನಪಿನ ಹೊಯ್ದಾಟದ ಹೊಡೆತಕ್ಕೆ ಸಿಕ್ಕು.
ಕೊನೆ ಅಂತು ಮುಟ್ಟುವುದೇ ಇಲ್ಲ
ಎಂದು ಬತ್ತದ ನೀರಿನ ಒರತೆಯಂತೆ
ಸದಾ ಹರಿಯುತ್ತಲಿಹುದು
ತೆರೆಯುತ್ತಾ ಹೋದಂತೆ
ಒಂದಾದ ಮೇಲೊಂದರಂತೆ ಪುಟಗಳು
ಬರುತ್ತಲಿಹುದು
ಕಣ್ಣಂಚನ್ನು ಒದ್ದೆಯಾಗಿಸುತಲಿಹುದು
ಪುಟ ಮುಗಿದದ್ದು ಗೊತ್ತೇ ಆಗುವುದಿಲ್ಲ…
ನೆನಪುಗಳು ಎಂದು ಸಾಯುವುದಿಲ್ಲ
ಮತ್ತೇ ಮತ್ತೇ ಹುಟ್ಟುತ್ತಲೇ ಇರುತ್ತದೆ
ದಿನವೂ ಸೂರ್ಯ ಹುಟ್ಟಿದಂತೆ
ಮತ್ತೇ ಮತ್ತೇ ನೆನಪಾಗುತಿದೆ
ನೆನಪಾಗುತ್ತಲೇ ಇದೆ….
ಹೌದು ನೆನಪಿನ ಮೆರವಣಿಗೆ ಮುಗಿಯುವ ಹಾಗೆ ಕಾಣುತ್ತಿಲ್ಲ!
ಮುಗಿಯುವುದು ಇಲ್ಲ….
ನೆನಪುಗಳು ಅಚ್ಚಳಿಯದೆ ಮನಸಿನಲಿ ಉಳಿಯುವುದು
ಸದಾಕಾಲ ಮತ್ತೇ ಮತ್ತೇ ಕಾಡುತ್ತಲೇ ಇರುವುದು…






0 Comments