ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆನಪಿನ ಘಮಲು…

ಸೌಜನ್ಯ ನಾಯಕ

ಬೆಳಗಿರುವೆ ನಾನೊಂದು
ಪುಟ್ಟ ಹಣತೆಯ
ಅಂಧಕಾರವನ್ನ ಹೊಡೆದೊಡಿಸಲು
ಉರಿಯುವ ದೀಪದ ಬೆಳಕಲಿ
ಬೆಸೆಯುವ ಪ್ರೀತಿಯ ಬೆಳಗಿಸಲು…

ಹಾಗೆಂದು
ನಾ ಹಚ್ಚಿದೊಂದು ಹಣತೆ
ಜಗದ ಕತ್ತಲೆಯನ್ನ
ಸಂಪೂರ್ಣವಾಗಿ ನುಂಗಲಾರದು
ಅದಾಗಲೇ
ನೂರಾರು ಹಣತೆಗಳು
ಬೆಳಗಿ ಆರಿ ಹೋಗಿರುವಾಗ…

ಆದರೂ
ಮತ್ತೆ ಬೆಳಗುತ್ತೇನೆ ಹಣತೆಯ
ಬೆಳಕಿನೆಡೆಗೆ ನನ್ನ
ನಡೆಸಬಹುದೆಂಬ ಕಾರಣಕೆ
ದಾರಿ ತಪ್ಪಿಸಿದ
ನೂರಾರು ಕತ್ತಲೆಗಳು ಅಡ್ಡವಾದಂತಿದೆ
ಮನದಲ್ಲಿ ಸ್ಪಷ್ಟ ನಿಲುವೊಂದ ತಾಳುವುದಕೆ…

ಸಾಕಷ್ಟು ಎಣ್ಣೆಗಳ ಕುಡಿದರೂ
ಸಾವಿರಾರು ಬೆಳಕುಗಳ ಉಟ್ಟರೂ
ಕೊನೆಯೆಂಬುದು
ಬೂದಿಯಲ್ಲಿಯೇ ಅಡಗಿದ್ದರೂ
ತೀರದ ಬಾಯಾರಿಕೆ
ಈ ಕತ್ತಲೆಗೆ…

ಇಷ್ಟಾದರೂ
ಮತ್ತೆ ಬೆಳಗುತ್ತೇನೆ
ನಾನು ಪುಟ್ಟದೊಂದು ಹಣತೆಯ
ಶಾಶ್ವತ ಬೆಳಕಿನ ನಿರೀಕ್ಷೆಯಿಂದಲ್ಲ
ಕತ್ತಲೆ ಮರೆಮಾಚಿದ್ದ
ನನ್ನವನ ಮೊಗವ
ಬೆಳಗಿದಷ್ಟು ಹೊತ್ತು
ದೀಪದ ಬೆಳಕಲಿ
ಮುದ್ದಿಸುವ ಚಿಕ್ಕದೊಂದು ಆಸೆಯಿಂದ…

ದೀಪ ಆರಿದ ಮೇಲೆ
ಮತ್ತದೆ ಕತ್ತಲು
ಕವಿದ ಕತ್ತಲೆಯ ಕಳೆಯಲು
ಜೊತೆಯಾಗಿದೆ
ಕಾಣದ ಅವನ
ನೆನಪಿನ ಘಮಲು…

‍ಲೇಖಕರು Avadhi

23 November, 2020

3 Comments

  1. Dhanyashree P

    ಜಿ.ಎಸ್. ಶಿವರುದ್ರಪ್ಪ ನವರ “ನನ್ನ ಹಣತೆ” ಕವಿತೆಯಿಂದ ಯಥಾವತ್ ಪದ ಮತ್ತು ಭಾವಗಳನ್ನು ಪಡೆದು ಹೀಗೆ ಬರೆಯುವುದಕ್ಕಿಂತ ಸ್ವಂತಿಕೆಗೆ ಯತ್ನಿಸಿದರೆ ಒಳ್ಳೆಯದು.

  2. Soujanya

    ಹಣತೆ ಎಂದ ಮೇಲೆ ಬೆಳಕು ಕತ್ತಲೆ ಇರುವಂತದ್ದೆ…ಹಾಗೆಂದು ನಾನು ಅವರ ಕವನವನ್ನ ನಕಲು ಮಾಡಿದ್ದೇನೆ ಎಂದು ತಪ್ಪು ತಿಳಿಯಬೇಡಿ…ಕತ್ತಲು ಮರೆಮಾಚಿದ ಬೆಳಕಲ್ಲಿ ತನ್ನವರ ಹುಡುಕು ಪರಿ ಒಂದೇ ತೆರನಾದ ಭಾವನೆಯ ಕೊಡುತಿದೆ ಎಂದ ಮಾತ್ರಕ್ಕೆ ಇದು ನನ್ನ ಸ್ವಂತ ರಚನೆಯಲ್ಲವೆಂದೂ ನೀವು ಹೇಳುವುದು ಸರಿಯಲ್ಲ… ಓದಿಗೆ ಧನ್ಯವಾದಗಳು

  3. Sanjeev Aladhi

    Simpallagi ondhu Olle kavithe, smooth expression of human……..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading