ವಾಸುದೇವ ನಾಡಿಗ್
ಕಂದನಾಗಿದ್ದಾಗಿನಿಂದಲೂ
ಸೆಣಸುತ್ತಲೆ ಬಂದಿದ್ದೇನೆ
ಸಖಿ
ಸಾವಿನ ಕೂಡ ಅದರ ದವಡೆಗಳಲ್ಲಿ
ಆಟವಾಡಿ ಹಠ ಹೂಡಿ
ಬೆಣ್ಣೆ ಮೆದ್ದ ತುಟಿಯು
ವಿಷದೆದೆಯನ್ನೂ ಹೀರಿತು
ಸರ್ಪನೆತ್ತಿಯ ಮೇಲೂ ಕೊಳಲ ನುಡಿಸಿ
ಕಿಣಿ ಕಿಣಿ ಗಂಟೆಯ ನಾದ
ಹಸುಗಳ ಕೊರಳು
ನಂದಗೋಕುಲದ ತುಂಬಾ
ನಂದದ ನಗುವ ಹಚ್ಚಿಟ್ಟು

ಪ್ರೀತಿಯ ತೊರೆಗೆ ಬೊಗಸೆಯೊಡ್ಡಿ
ಕಾದಿದ್ದೆ,
ಮಥುರೆಯ ಕದ ತೆರೆದೆ ನೀನು
ಅರೆ ಮುಚ್ಚಿದ ಕಣ್ಣಲೂ ನಿನ್ನದೇ ಬಿಂಬ
ಮುರಳಿಯ ಒಳ ಹೊರಗೆಲ್ಲಾ
ನಿನ್ನದೇ ನಡೆ ಚೆಲುವು
ಹಳೆಯ ದಾರಿಗಳನೆಲ್ಲ
ಹಾಡಾಗಿಸಿದೆ ನೀನು
ಹೃದಯದಿಕ್ಕೆಲಗಳಲಿ ಪ್ರೀತಿ ಬಿತ್ತಿ
ಕಾಲುಕೆದರಿ ಕದನಕೆ
ಕರೆವ ವೈರಿಗಳನ್ನೂ ಮರೆಸಿದೆ!
ನೀ ಬರುವ ಮುಂಚೆ
ಜನರ ನಡುವೆಯೇ ಇದ್ದೆ
ನೀ ಬಂದ ಮೇಲೆ ಒಂಟಿಯಾದೆ
ಸಖಿ,
ಒಂಟಿ ತನವನ್ನು ನೀನೆ
ಮರುವ್ಯಾಖ್ಯಾನಿಸಿದೆ.






ನೀ ಬರುವ ಮುಂಚೆ
ಜನರ ನಡುವೆಯೇ ಇದ್ದೆ
ನೀ ಬಂದ ಮೇಲೆ ಒಂಟಿಯಾದೆ
ಸಖಿ,
ಒಂಟಿ ತನವನ್ನು ನೀನೆ
ಮರುವ್ಯಾಖ್ಯಾನಿಸಿದೆ. very nice…
Very nice…
nice poem
kavana chennaagide.
nimma krishna series kavanagalu chennaagive.