ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀ ಎನ್ನ ಬುದ್ಧ ಕಾರುಣ್ಯ..

ಎನ್. ರವಿಕುಮಾರ್ ಟೆಲೆಕ್ಸ್
ದೇವರಲ್ಲ ಈ ಜಂಗಮ
ಅನ್ನ ಕಾಣ, ಜ್ಞಾನ ಕಾಣ
ಧರ್ಮ ಕಾಣ.
ಗುರುವಷ್ಟೆ ಅಲ್ಲ ಈ ಅಜ್ಜ
ಒಳಮನೆಯ ಹಣತೆ
ಎದೆಗೂಡ ಕತ್ತಲಿಗೆ
ಚೆಂಬೆಳಕು – ತಂಬೆಳಕು
ಆಡಿದ ಮಾತೆಲ್ಲ ಲಿಂಗವಾಯ್ತು
ನಡೆದಾಡಿದ ನೆಲವೆಲ್ಲ ಸಂಗಮವಾಯ್ತು
ಕುಲವಿಲ್ಲ- ಹಲವಿಲ್ಲ
ಕಾಯಕದ ಕಾಯದೊಳಗೆ
ಜಗದೊಡೆಯ ಜಂಗಮರೂಪಿ

ಅಗುಳಗುಳು ಜೀವಧ್ಯಾನ
ಪದ ಪದವೂ ಜ್ಞಾನ ಧ್ಯಾನ
ನಿಮ್ಮ ಸಂಗವೆಂದರೆ
ಚುಳುಕಾಗಿ ಅಂಗದಲ್ಲಿ ಕುಳಿತ ಲಿಂಗ ಪೂಜೆ ಅಯ್ಯ.
ಧರ್ಮ ಮುಡಿದವರಲ್ಲ
ಧರ್ಮ ನಡೆದವರು
ನಡೆ- ಮುಡಿ ಒಂದಾದ
ದೇಹ ಗುಡಿ
ದೇವರೆಂದರೂ ಕಿರಿದಾದೀತು
ಹಿರಿದಪ್ಪ ಕೂಡಲ ಸಂಗನ ಬಸವಣ್ಣ
ಎನ್ನೊಡೆಯ ನೀ ಎನ್ನ
ಬುದ್ಧ ಕಾರುಣ್ಯ
ನಿನಗೆ ಶರಣು ಶರಣಾರ್ಥಿ.

‍ಲೇಖಕರು avadhi

21 January, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading