ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಮೀಲಿತ ನೇತ್ರ ತಥಾಗತ ಬೆಳಕು ತುಳುಕಿಸುತ್ತ ಬರಲಿ..

ಭಾವುಕ ಕವಿಯ ಒ೦ದು ಕನವರಿಕೆ

ಮೇಗರವಳ್ಳಿರಮೇಶ್

ಪ್ಯಾಟನ್ ಟ್ಯಾ೦ಕುಗಳು ಮುಳುಗಿ ಹೋಗಲಿ ಕಡಲಿನಲ್ಲಿ

ಅಣ್ವಸ್ತ್ರಗಳು ಅಣು ಅಣುವಾಗಿ ಅಡಗಿ ಹೋಗಲಿ ಮರಳುಗಾಡಿನಲ್ಲಿ
ಕ್ಷಿಪಣಿಗಳು ಸಿಡಿಯದೆ ಕ್ಷೀಣಿಸಲಿ ಹಿಮ ಬೆಟ್ಟದ೦ಚಿನಲ್ಲಿ
ಬ೦ದೂಕುಗಳು ಕಟ್ಟಿಗೆಗಳಾಗಿ ಸುಟ್ಟು ನಡುಕವನ್ನು ಓಡಿಸಲಿ
ಲಾ೦ಗು, ಮಚ್ಚು, ಚೂರಿಗಳು ತುಕ್ಕು ಹಿಡಿದು ಗುಜರಿ ಸೇರಲಿ.

ಬಿರುಗಾಳಿ ಬೀಸಿ ಮಳೆ ಸುರಿದು ಹೋದ ಮರು ಘಳಿಗೆ
ತ೦ಗಾಳಿ ತೀಡುವ ರಾತ್ರಿ
ಎಲ್ಲವೂ ತೊಳೆದು ಹೋಗಿ ಸ್ವಛ್ಛವಾದ ರಾತ್ರಿ
ನಿಮೀಲಿತ ನೇತ್ರ ತಥಾಗತ
ಬೆಳಕು ತುಳುಕಿಸುತ್ತ ಬರಲಿ.
 
ಅವನ ಪ್ರೀತಿಯ ಪ್ರಭೆ ಜಗತ್ತನ್ನೆಲ್ಲ ಬೆಳಗಲಿ
ಆ ಬೆಳಕಿನಲ್ಲಿ
ಮನುಷ್ಯರು  ಮನುಷ್ಯರನ್ನು ಮನುಷ್ಯರೆ೦ದು  ಗುರ್ತಿಸಲಿ ಮತ್ತು
ಪ್ರೀತಿಸಲಿ.
 

‍ಲೇಖಕರು avadhi

20 February, 2014

2 Comments

  1. Shreepad Hegde

    ಒಳ್ಳೆಯ ಕವನ. ಆಶಾವಾದಿಯಾಗಿ ಕನಸನ್ನೂ ಕಾಣದಿದ್ದರೆ ಮತ್ತೇನುಂಟು ಬದುಕಿನಲ್ಲಿ.

  2. Vidyashankar Harapanahalli

    Good poem

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading