ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ಪಿಸುಮಾತುಗಳ ಜಾಡುಹಿಡಿದು..

ಬರುವ ಭರವಸೆಗೊಂದು…

ರಜನಿ ಗರುಡ 

ಎಂದೋ ಬರುತ್ತೇನೆಂದೆ

ಯಾವತ್ತೊ ಗೊತ್ತಿಲ್ಲ…..

 

ಮಬ್ಬು ಮುಂಜಾನೆಯಲ್ಲೊ

ನಡು ಮಧ್ಯಾಹ್ನದ ಬೆವರ ಬಿಸಿಲಲ್ಲೊ

ಮುಸ್ಸಂಜೆಯ ಕಥಾಪ್ರಸಂಗವಾಗುವ ಹೊತ್ತಲ್ಲೆಲ್ಲೊ

rain sheಅಂಥದ್ದೇ ಯಾವದೊ ಹೊತ್ತಲ್ಲಿ

ನಿನ್ನ ಪಿಸುಮಾತುಗಳ ಜಾಡುಹಿಡಿದು

ಬರುತ್ತೇನೆ  ಗ್ಯಾರಂಟಿ

 

ತೆರೆದಿಡು ಬಾಗಿಲು-ಕಿಟಕಿಗಳ  ನನಗಾಗಿಯೆ

ಕೋಣೆಯನು ಖಾಲಿಯಿಡು

ಮುಚ್ಚಿ ಬಿಡು ಹಿತ್ತಲ ಬಾಗಿಲ

ಗಾಳಿ ನನ್ನ ಹೊರ ನೂಕದಂತೆ

ಕಾಯುತ್ತಿರು ನೀನು

ಹೊಸ್ತಿಲ ಒಳ ನಿಂತು

ನನ್ನದೆರುಗೊಳ್ಳು

 

ಕೇಳದೇ ಉಳಿದ

ಹಾಡಿನಾಲಾಪದಂಗಿ ತೊಡಿಸು

ಮುತ್ತಿನೋಲೆ ಮತ್ತೆ ಮತ್ತೆ ಕರುಣಿಸು

she oonಕೆನ್ನೆತಾಗುವ ನಿನ್ನ ಬಿಸಿಯುಸಿರಿಗೆ

ಹಾರುವ ಮುಂಗುರುಳ ಹಿಡಿದಿಡು

ನಿನ್ನ ಮೂಕ ಕಣ್ಣೀರ ಹನಿಗಳೆಲ್ಲ

ಕೊರಳ ಹಾರವಾಗಿಸಿಬಿಡು

 

ಕಟ್ಟಿದ ಗಂಟಲಲ್ಲಿ ಗೊರ ಗೊರವೆನ್ನುತ್ತ

ಮತ್ತೆ ಯಾವಾಗ ಬರವಿಯೆಂದು ಕೇಳಬೇಡ

ಚಣವೂ ಇಲ್ಲಿ ನಿಲ್ಲಗೊಡುತ್ತಿಲ್ಲ

ಸುತ್ತಿಕೊಂಡಿರುವುದೆಲ್ಲ ಸರಾಗ ಸರಿದರೆ

ಮತ್ತೆ ಬರುವೆ….

 

ಬಂದವಳೇ ದೀಪ  ಬೆಳಗುತ್ತೇನೆ

ಮೊದಲು

‍ಲೇಖಕರು Admin

3 December, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading