ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ಕಣ್ಣ ಹೊಂಬೆಳಕಿನಲಿ..

ಕಣ್ಣಂಚಿನ  ಬಿಂಬ

sarojini_padasalagiಸರೋಜಿನಿ  ಪಡಸಲಗಿ

hand with an eyeಕಣ್ಣಂಚಿನ ಕಂಬನಿಯಲಿ ಬಿಂಬನೊಂದ ಕಂಡೆ
ತಡೆಯದಾದೆ ಆ ಧಾರೆ ಅದು ನೀನು ಎಂದು ಕೊಂಡೆ.

ಹರಿವ ನೀರಲೊಂದು ಕೋಲ್ಮಿಂಚು ಹೊಳಪ ಕಂಡೆ
ನೆನಪಿನಂಗಳ ತುಂಬ ಬೆಳ್ಳಿ ಬೆಳಕ ತುಂಬಿ ಕೊಂಡೆ
ಆ ಹುಲ್ಲು ಹಾಸಿನಲಿ ನಿನ್ನ ಕಣ್ಣ ಹೊಂಬೆಳಕಿನಲಿ
ನೂರೆಂಟು ಕನಸು ನನ್ನ ಮನದಿ ಹೆಣೆದುಕೊಂಡೆ.

ನನ್ನೊಳಗೆ ನೀನೆಂಬೆ ನಿನ್ನೊಳಗೆ ನಾನೆಂಬೆ
ಆ ಮಧುರ ಭಾವಲೊಂದು ಸುಖವ ಕಂಡುಕೊಂಬೆ
ಮುಗಿಯದಿರಲಿ ಆ ಗಳಿಗೆ ಎಂದು ಕೈಯ ಹಿಡಕೊಂಬೆ
ಜಾರದಿರಲಿ ಸಮಯವೆಂದು ಕಣ್ಮುಚ್ಚಿಕೊಂಬೆ

ಮುಗಿಯದಿರಲೆಂದ ಗಳಿಗೆ ತಿಳಿಯದೇ  ಮುಗಿಯಿತು
ಕಣ್ಮುಚ್ಚಿಕೊಂಡರೂ ಸಮಯ ಜಾರಿಯೇ ಹೋಯ್ತು
ಉಕ್ಕಿ ಬಂದ ಧಾರೆಯಾ ಅರಿಯದೇ ಕೈ ತಡೆಯಿತು
ಕಣ್ಣಂಚಿನ ಬಿಂಬ ಎದೆಯ ಗೂಡು ಸೇರಿ ನಿಂದಿತು.

‍ಲೇಖಕರು Admin

19 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading