ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ಅಹಂಕಾರವನ್ನು ಝಾಡಿಸಿ ಬಾ..

renuka nidagundiರೇಣುಕಾ ನಿಡಗುಂದಿ

ಜ್ಞಾನಪೀಠ ಪುರಸ್ಕೃತ ಲೇಖಕಿ ಮಹಾಶ್ವೇತಾದೇವಿ

ಅವರ ಒಂದು ಸುಂದರ ಕವಿತೆ ನಿಮ್ಮ ಓದಿಗಾಗಿ…

mahashwetha devi

ಬಂದೆಯಾ ನೀನು
ತೆರೆದಿದೆ ಬಾಗಿಲು , ಒಳಗೆ ಬಾ.

ಸ್ವಲ್ಪ ನಿಲ್ಲು
ಹೊಸಿಲ ಬಳಿ ಕಾಲೊರೆಸು ತಟ್ಟಿದೆ
ನಿನ್ನ ಅಹಂಕಾರವನ್ನು ಝಾಡಿಸಿ ಬಾ.

man in linesಮಧುಮಾಲತಿ ಮಾಳಿಗೆವರೆಗೂ ಹಬ್ಬಿದೆ
ನಿನ್ನ ಸಿಟ್ಟನ್ನೆಲ್ಲ ಅಲ್ಲೇ ಸುರಿದು ಬಾ.

ತುಳಸಿಯ ವೃಂದಾವನವಿದೆ
ಮನಸ್ತಾಪವನ್ನೆಲ್ಲ ಅದಕರ್ಪಿಸಿ ಬಾ.

ನಿನ್ನ ಧಾವಂತವನ್ನೆಲ್ಲ ಹೊರಗಿನ
ಗೂಟಕ್ಕೆ ಕಟ್ಟಿಟ್ಟು ಬಾ.

ಮೆಟ್ಟುಗಳೊಂದಿಗೆ ನಿನ್ನೆಲ್ಲ ನಕಾರಾತ್ಮಕಗಳನ್ನೂ ಕಳಚಿಟ್ಟು ಬಾ

ಹೊರಗೆ ಆಡುತ್ತಿರುವ ಮಕ್ಕಳಿಂದ
ತುಸು ತುಂಟತನವನ್ನು ಪಡೆದುಕೊಂಡು ಬಾ.

ಅಲ್ಲಿ ಗುಲಾಬಿಯ ಹೂಕುಂಡದಲ್ಲಿ ಮುಗುಳ್ನಗು ಅರಳಿದೆ
ಬಿಡಿಸಿ ಮುಡಿದುಕೊಂಡು ಬಾ.

ತಾ… ನಿನ್ನೆಲ್ಲ ಸಂತಾಪಗಳನ್ನೆಲ್ಲ ನನಗೆ ಕೊಡು
ನಿನ್ನ ದಣಿವಿಗೆ ಸೋಗಿನ ಬೀಸಣಿಕೆ ಬೀಸುವೆ.

ನೋಡು, ಸಂಜೆಯನ್ನು ಹರಡಿದ್ದೇನೆ
ರವಿಯನ್ನು ಕ್ಷಿತಿಜಕ್ಕೆ ಕಟ್ಟಿದ್ದೇನೆ
ಆಗಸಕ್ಕೆಲ್ಲ ಓಕುಳಿ ಚೆಲ್ಲಿದೆ.

ಪ್ರೀತಿ ಮತ್ತು ಭರವಸೆಯ ಮಂದಾಗ್ನಿಯಲ್ಲಿ
ಚಹಕ್ಕಿಟ್ಟಿದ್ದೇನೆ
ಗುಟುಕು ಗುಟುಕಾಗಿ ಕುಡಿ
ನೋಡು, ಬದುಕು ಇಷ್ಟು ಕಷ್ಟದ್ದೂ ಏನಲ್ಲ !!

‍ಲೇಖಕರು Admin

14 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading