ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನೆಯ ಮಳೆಗೆ ಅಳಿಸಿದ ನೆನಪು

ಗ್ಯಾರೇಜ್

ಗುರು ಸುಳ್ಯ

 

ಪ್ರತಿ ರಾತ್ರಿ ಹಳೇ ದಾರಿಯೊಂದು
ತನ್ನೆಡೆಗೆ ನಡೆದು ಬರುತ್ತಲೇ
ದಾರಿಯಲ್ಲಿ ಬೀಸಿದ ಹಲವು ಕೈಗಳು
ಗಾಳಿಯಲ್ಲಿ ಕರಗಿ ಬೆಳಗಾಗುತ್ತದೆ,
ಕೈಯಲ್ಲಿ ಸ್ಪ್ಯಾನರ್ ಮಿನುಗುತ್ತದೆ.

ವಾಹನಗಳು ಮುರಿದು ಬಿದ್ದ ಗ್ಯಾರೇಜು
ಮೈತುಂಬ ಹೊಗೆಯ ಉಗುಳು.
ದೂರ ಮೋಡಗಳಲ್ಲಿ
ತನ್ನೂರಿಗೆ ಹೋಗುವ ವಾಹನಗಳ ಸಾಲು
ಒಂದಕ್ಕೊಂದು ಡಿಕ್ಕಿ ಹೊಡೆದು
ಕರಗುತ್ತಿರುವ ಊರು.

ಗಾಳಿಯೊಂದಿಗೆ ಮಿಳಿತವಾದ ತೈಲ
ಏದುಸಿರು ಬಿಡುತ್ತಿರುವ ಇಂಜಿನ್
ಎದೆ ಬಡಿತಕ್ಕೊಂದೊಂದು ಮೈಲಿಗಲ್ಲು
ಅಂದಾಜು ! ಅದೆಷ್ಟು ದೂರದ ಪಯಣ..

ನಿನ್ನೆಯ ಮಳೆಗೆ ಅಳಿಸಿದ ನೆನಪು
ಬೆಚ್ಚಗೆ ಹರಿಯುತ್ತಿದೆ.
ಮಡ್ಡಿ, ಗ್ರೀಸ್, ಆಯಿಲ್ ತಿನ್ನುವ
ಹೊಟ್ಟೆ ಬಟ್ಟೆಯೊಳಗಿಂದ
ಒದ್ದೆಯಾದ ಕಪ್ಪು ಬಿಳುಪು ಕಣ್ಣು
ಹೊರಜಗತ್ತಿನೆಡೆಗೆ ಇಣುಕುತ್ತಿದೆ.

ಗ್ಯಾರೇಜಿನೊಳಗೆ ನಿನ್ನೆ ನಾಳೆಗಳು
ರಿಪೇರಿಗೆ ನಿಂತಿವೆ
ದೂರದ ಶೋ ರೂಮಿಗೆ ದೃಷ್ಟಿ ನೆಟ್ಟು…

 

‍ಲೇಖಕರು admin

26 March, 2017

1 Comment

  1. ರಘುನಾಥ

    ಚಂದದ ಕವನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading