ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನನ್ನು ಮರೆತು ನಮಾಜನ್ನೆ ಆರಾಧಿಸ ತೊಡಗಿದ್ದಾರೆ – ಬಿ ಎಂ ಬಶೀರ್

ನೀನೊಬ್ಬನಿದ್ದೀಯೆಂದು…

ಬಿ ಎಂ ಬಶೀರ್

ಗುಜರಿ ಅಂಗಡಿ

1

ನನ್ನ ದೊರೆಯೇ

ಧರ್ಮ ಪಂಡಿತರು

ನಿನ್ನ ಆರಾಧನೆಗೆಂದು

ನಮಾಜಿಗೆ ನಿಂತರು

ಇದೀಗ ನಿನ್ನನ್ನು ಮರೆತು

ನಮಾಜನ್ನೆ ಆರಾಧಿಸ ತೊಡಗಿದ್ದಾರೆ

ಹಣ್ಣು ಕೊಯ್ಯಲೆಂದು

ಮರಕ್ಕೆ ಏಣಿ ಇಟ್ಟವರು

ಹಣ್ಣನ್ನು ಮರೆತು

ಏಣಿಯನ್ನೇ ತಬ್ಬಿಕೊಂಡಿದ್ದಾರೆ…!

2

ಧರ್ಮ ಪಂಡಿತರು

ನಿನ್ನ ನೆನೆದು

ಭಯ ಪೀಡಿತರಾಗಿದ್ದಾರೆ

ನನ್ನ ದೊರೆಯೇ…

ನಾನೋ ಅಜ್ಞಾನಿ,

ನೀನೋಬ್ಬನಿದ್ದೀಯೆಂದು

ನಿರ್ಭಯನಾಗಿದ್ದೇನೆ…

3

ಸೈತಾನನಿಗೆಂದು ಎಸೆದ ಕಲ್ಲು

ಅವನ ಬೆರಳ ಉಗುರನ್ನೂ ನೋಯಿಸಲಿಲ್ಲ…

ಕಳ್ಳ ನಮ್ಮ ಮನೆಯ

ಅಡುಗೆ ಕೋಣೆಯಲ್ಲಿ

ಬಚ್ಚಿಟ್ಟು ಕೊಂಡಿದ್ದಾನೆ

ನಾವೋ ಮನೆಯಂಗಳದಲ್ಲಿ

ಅವನನ್ನು ಹುಡುಕುತ್ತಿದ್ದೇವೆ…

‍ಲೇಖಕರು G

9 November, 2012

2 Comments

  1. mmshaik

    chennagive..hanchikondiddakke dhnyavaadagaLu.

  2. boluwaru

    itteettechege naanu ninnannee arradhisalaarambissiddene.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading