ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನಗೇನಾಗಿತ್ತು ಕಡಿಮೆ..

ಪ್ರಕಾಶ್ ಅಬ್ಬೂರು

ನನ್ನವ್ವ,,,ನನ್ನಪ್ಪನ ಮನದೊಡತಿ ಆಗಿದ್ದಳಾ !
ಹೋಗಲಿ, ಮನೆಯೊಡತಿ?

ಸೊಸೆಯಂದಿರು
ಬರುವವರೆಗೆ ಆಕೆಗೆ
ಅತ್ತೆ ಹೇಳಿದ್ದೇ ಮಾತು !

ಒಂದೂವರೆ ವರ್ಷಕ್ಕೊಂದು ಮಗು, ಕರ್ತವ್ಯವಾಗಿತ್ತು !

ಗಂಡನಿಂದ ವಿರಾಮ !

ಸರಿ, ಸೊಸೆಯಂದಿರು ಬಂದರು ,
ಈಗ ಪೂರ್ಣ ವಿರಾಮ.

ನಿಮಗೇನು ಕಡಿಮೆ, ಒಂದೆಡೆ ಕುಳಿತ್ತಿದ್ದರಾಗದೆ!

ತಾನೊಂದು ದಿನ ಅತ್ತೆಯಾಗುತ್ತೇನೆ, ಆಳಬಹುದು ಐವರು ಸೊಸೆಯಂದಿರನ್ನು .

ಇದ್ದೀತು ಅವಳ ಕನಸು !

ಸೊಸೆಯಾಗಿ ಆಳಿಸಿಕೊಂಡವಳಿಗೆ ಅತ್ತೆಯಾಗಿ ಆಳುವ ಸೌಭಾಗ್ಯ ಸಿಗಲಿಲ್ಲ !

ಆದರೇನಂತೆ ಸಿಕ್ಕಿತ್ತಲ್ಲ, ವಿರಾಮದ ಭಾಗ್ಯ .

ಮಾತಿಗೆ ಮೊದಲು ಕಾಳಜಿಯ ಮಾತು.
ನಿಮಗ್ಯಾಕಿವೆಲ್ಲಾ , ಏನು ಕಡಿಮೆಯಾಗಿದೆ ನಿಮಗೆ,

ಹೌದು!
ಏನು ಕಡಿಮೆಯಾಗಿತ್ತು
ನಿನಗೆ,
ಕೇಳಲು ನಾವಿದ್ದೇವೆ.
ಹೇಳಲು ನೀನಿಲ್ಲ ,

ಒಂದು ‘ತಪ್ಪಡ್’ ,

ನಡೆದಿದೆ ಚರ್ಚೆ ಎಷ್ಟೆಲ್ಲಾ ,
ನಿನಗೆ ಬಿದ್ದ ಏಟುಗಳ
ಲೆಕ್ಕವಿಟ್ಟವರಾರು.

ನಿನಗೇನಾಗಿತ್ತು ಕಡಿಮೆ!! ನಮಗಾರಿಗೂ
ಗೊತ್ತಾಗಲೇ ಇಲ್ಲ

ಹೌದು,
ನಿನಗೇನಾಗಿತ್ತು ಕಡಿಮೆ !!

‍ಲೇಖಕರು avadhi

11 May, 2020

1 Comment

  1. T S SHRAVANA KUMARI

    ತಾಯಿಯೆಂದರೆ ಕಳೆದುಕೊಂಡ ಮೇಲಷ್ಟೇ ಅರ್ಥವಾಗುವ ವ್ಯಕ್ತಿಯೇ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading