ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಜ ಹೇಳಿಬಿಡುತ್ತೇನೆ…

ಚಂದ್ರಕಾಂತ ವಡ್ಡು

ಇಂತಹದೊಂದು ಸಂಕಲನ ರೂಪಿಸಬೇಕೆಂದು ನನಗೆ ತೀವ್ರವಾಗಿ ಅನ್ನಿಸಲು ಸುತ್ತಲಿನ ವಿನಾಶಕಾರಿ ಆಗುಹೋಗುಗಳ ಹೊರತಾಗಿ ಬೇರೇನೂ ಕಾರಣ ಇರಲಿಲ್ಲ. ಸಮಕಾಲೀನ ಸಂದರ್ಭದ ಸಾಮಾಜಿಕ ಮಾಲಿನ್ಯಕ್ಕೆ ಕೇವಲ ಮೂಕಸಾಕ್ಷಿಯಾಗಿರಲು ಯಾರಿಗಾದರೂ ಹೇಗಾದರೂ ಎಷ್ಟುದಿನ ಸಾಧ್ಯ? ಹೃದಯ ಇರುವವರೆಲ್ಲಾ ತಮ್ಮದೇಯಾದ ರೀತಿಯಲ್ಲಿ, ನೀತಿಯಲ್ಲಿ, ಭೀತಿಯಲ್ಲಿ, ಇತಿಮಿತಿಯಲ್ಲಿ ಪ್ರತಿಕ್ರಿಯೆ-ಪ್ರತಿರೋಧ ನೀಡತೊಡಗಿದಾಗ ನಾನು ಆಯ್ದುಕೊಂಡ ಹಾದಿ ಇದು.

ಈ ಸಂಕಲನ ರೂಪಿಸುವ ಪ್ರತಿಯೊಂದು ಹಂತದಲ್ಲೂ ನಾನು ಅಸಹಾಯಕತೆಯ ಸೆಳೆತದಿಂದ ತಪ್ಪಿಸಿಕೊಂಡು ಭರವಸೆಯ ದಡ ಸೇರುವ ಭಾವ ಅನುಭವಿಸಿದ್ದೇನೆ. ಈ ಸಂಕಲನದ ಸಂಪಾದಕೀಯ ಕಾರ್ಯ ನನ್ನ ಮನಸ್ಸನ್ನು ಸಂಪೂರ್ಣ ತೋಯಿಸಿದೆ. ನಾನು ಅಕ್ಷರ ಬದುಕಿನ ಅನುಭವದಲ್ಲಿ ಹಿಂದೆಂದೂ ಕಾಣದ ಸಂತೃಪ್ತಿಗೆ ಕಾರಣರಾದ ಲೇಖಕರಿಗೆ, ಬರೆಯಿಸಿಕೊಂಡ ಈ ಲೇಖನಗಳಿಗೆ ನಾನು ಋಣಿ.

‍ಲೇಖಕರು Admin

13 May, 2022

2 Comments

  1. T S SHRAVANA KUMARI

    ಲೇಖನವನ್ನು ಬರೆದ ನನಗೂ ಅದೇ ಭಾವವಿದೆ ಸರ್

  2. ನೂತನ ದೋಶೆಟ್ಟಿ

    ನಿಮ್ಮ ಪ್ರಯತ್ನ ಶ್ಲಾಘನೀಯ .
    ಯಾರೂ ಮಾಡಿಲ್ಲ ಇದನ್ನು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading