ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನಿಗಾ ವಹಿಸಲೂಬೇಕಾಗಿದೆ ಇನ್ನೊಮ್ಮೆ ಅಂತರಂಗವೇ ಸೀದು ಹೋಗದಂತೆ..'

ಮಾಲತಿ ಭಟ್

ಇನ್ನಾದರೂ
ಮಾತು
ಕೊಡಬೇಕಾಗಿದೆ..!
 
ತಿಂಗಳುಗಟ್ಟಲೆ ಮನೆಯಿಂದ ಹೊರಗುಳಿದ
ಹಾಲು ಕಾಯಿಸುವ ಬೋಗುಣಿಗೆ ಮರಳಿ
ಅಡುಗೆಮನೆ ಪ್ರವೇಶಿಸುವ ಮಹಾಯೋಗ;
ಒಲೆಯ ಗದ್ದುಗೆಯೇರಿ ಸದ್ದು ಮಾಡುವ
ಸಂಭ್ರಮದ ಸ್ವಪ್ನ..!

ಅದೊಂದು ದಿನ ಎಚ್ಚರ ತಪ್ಪಿದ
ಬೋಗುಣಿಗೆ ತಿಳಿಯಲೇ ಇಲ್ಲ,
ತನ್ನೊಡಲೊಳಗಿನ ಹಾಲಿನ ಪ್ರಮಾಣ.!
ಉರಿ ಹಚ್ಚಿಸಿಕೊಂಡು ಕೊತಕೊತನೇ
ಕುದಿದು ಹಾಲುಕ್ಕಿಸುವ ಗೋಜಿಗೂ ಹೋಗಲಿಲ್ಲ;
ಉಸುರಲಿಲ್ಲ,ಚೂರೇ ಚೂರು ಶಬ್ಧವನ್ನು ಕೂಡ!
ಕಾಯುತ್ತಲೇ ಇತ್ತು,ಕುದಿಯುತ್ತಲೇ ಇತ್ತು,
ಕಾದು ಕರ್ರಗಾಗಿ ತಳ ಹಿಡಿದು
ಕಮಟು ವಾಸನೆ ಬರುವವರೆಗು..!
 
ಹಾಲು ಗಟ್ಟಿಗೊಂಡು ಚರಟ ಹಿಡಿದದ್ದು
ನೆನಪಾದಾಗ,ಬೋಗುಣಿಗು ಅವ್ಯಕ್ತ ಭಾವಗಳಿದ್ದದ್ದು
ಪಕ್ಕಾ ಆಗುತ್ತದಾದರೂ ಈಗ ಮತ್ತೆ
ಜಡ ಬೋಗುಣಿಗು ಬಂದಿದೆ ಒಲೆಯೊಡತಿಯ ಪಟ್ಟ;
ಅವಳೀಗ ಅಡುಗೆಮನೆಯ
ಫಳ-ಫಳಗುಡುವ ಸುರಸುಂದರಿ..!
 
ಇನ್ನಾದರೂ ಮಾತು
ಕೊಡಬೇಕಾಗಿದೆ,ಬೇಕು ಬೇಡ ಎಲ್ಲಎಲ್ಲದಕ್ಕೂ
ಕಿವಿಗೊಡುವ ಸಖಿಯಾಗುತ್ತೇನೆಂದು;
ನಿಗಾ ವಹಿಸಲೂಬೇಕಾಗಿದೆ,
ಇನ್ನೊಮ್ಮೆ ಅಂತರಂಗವೇ ಸೀದು ಹೋಗದಂತೆ..!
 

‍ಲೇಖಕರು G

23 May, 2014

2 Comments

  1. hema

    nice–ಇನ್ನಾದರೂ ಮಾತು
    ಕೊಡಬೇಕಾಗಿದೆ,ಬೇಕು ಬೇಡ ಎಲ್ಲಎಲ್ಲದಕ್ಕೂ
    ಕಿವಿಗೊಡುವ ಸಖಿಯಾಗುತ್ತೇನೆಂದು;
    ನಿಗಾ ವಹಿಸಲೂಬೇಕಾಗಿದೆ,
    ಇನ್ನೊಮ್ಮೆ ಅಂತರಂಗವೇ ಸೀದು ಹೋಗದಂತೆ..!
    touchy lines

  2. mmshaik

    uttama kavite..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading