ನೀನಿಲ್ಲ ಅನ್ನುವದಾದರೆ
ನಿಂತ ನೆಲಕ್ಕೊಂದು
ಕನಸು ಬೇಡತ್ತದೆ ಮನಸು..
ಖಾಲಿ ಮನದ ಮೂಲೆಗಳಿಗೆ
ತುಟಿ ಹೊಲಿದುಕೊಂಡ ಮೌನ
ಪ್ರಶ್ನೆ ಮಾಡಿದಂತೆ
ಮುಖ ಮೇಲೆತ್ತುವ ಘಳಿಗೆಗಳಿಗೆ..
ಮುಚ್ಚಿದ ಕಣ್ಣ ರೆಪ್ಪೆಗಳಿಗೆ ಬಳೆದ
ವಿಭೂತಿಗೊಂದು
ರಸ್ತೆಯಲಿ ಅನಾಥವಾಗಿ ಬಿದ್ದ ಮಾತುಗಳ
ಹೆಕ್ಕುವದು ಭವಿಷ್ಯತ್ತೊಂದು..
ಉಫ್ ಎನ್ನದ ನಿಟ್ಟುಸಿರೊಂದು
ಮಳೆಯಂತೆ ಇಳಿದಾಗ ಕಣ್ಣಲ್ಲಿ
ಹಲವಾರು ಪ್ರಶ್ನೆಗಳು..

ಋತುಗಳೆಲ್ಲ ನನ್ನೊಂದಿಗೆ
ಮುನಿದು ಮಾತುಬಿಟ್ಟು ನಿಂತಿವೆ
ನೀ ಆಡುವ ಮಾತುಗಳಲ್ಲಿ ಅಳುತ್ತಾ ನಕ್ಕು
ನಿಲ್ಲುತ್ತವೆ. ಆ ಹಾದಿಯ ನೆನಪುಗಳು
ಹೇಗಿವೆ..? ನಲ್ಲೆಯ ಊರಿಂದ
ಬರುವ ತಂಗಾಳಿ ಅವಳ ಅಳುವ
ತಂಪನ್ನೆಂದು ಹೊದ್ದಿಲ್ಲ ಅಲ್ಲವೇ?
ನನ್ನ ಕಣ್ಣ ಹನಿಗಳು ಹುಡುಕುತ್ತಿವೆ..
ಎದ್ದು ಹೋದ ಆ ಘಳಿಗೆಗಳ
ಅಳುತ್ತಿದ್ದರೂ ನಗುವ ಚೆಲ್ಲುವ
ಆ ತುಟಿಗಳ ಅದುರುವಿಕೆ
ಎದೆಯಲ್ಲೊಂದು ಚುಳುಕು..
ಆಕಾಶದಲ್ಲಿ ಮಿಂಚೊಂದು
ಸುಳಿದಂತೆ..






bhavapoorna kavitege sharanu.
Naviraada kavite.
ನಿಂತ ನೆಲಕ್ಕೊಂದು ಕವಿತೆ ಬೇಡುತ್ತದೆ ಮನಸು. ನವಿರು ಭಾವ ಮೀಟುವ ಕವನ.
ಸುಂದರ ಕವನ. ನವಿರು ಭಾವ ಸೂಸುವ, ತಪ್ತ ಕವನ
ಕವಿತೆ ಚೆನ್ನಾಗಿದೆ ಮೇಡಮ್.
nice…
spandisida ellariguu dhannyavaadagaLu..