ಶಮ ನಂದಿಬೆಟ್ಟ
ಇದ್ದರೂ ಇಲ್ಲದಂತೆ
ಇಲ್ಲದಿದ್ದಾಗ ಎಲ್ಲೆಡೆಯೂ
ಇರುವಂತೆ ಯಾವತ್ತೂ
ನಿರೀಕ್ಷಿಸದೇ ಬರುವ
ಜ್ವರದಂತೆ ನನ್ನೊಳಗೆ
ನಿನ್ನ ತರಂಗಗಳು
ಮಳೆ ನಿಂತ ಮೇಲೂ
ಹನಿ ಕಡಿಯದೇ ಚಾವಡಿಯ
ಅಂಚಿನಲ್ಲಿ ಹಾಗೇ ಪಸೆಯುಳಿಸಿ
ತನ್ನಿರುವಿಕೆಯ ಶ್ರುತಪಡಿಸುತ್ತ
ಮತ್ತೆ ನಂಬಿಕೆಯ ಬೀಜವಾಗಿ
ಮೊಳೆವ ಹಾಗೆ ನೀನಿದ್ದೆ ನನಗೆ
ಹಂಬಲಿಕೆ ಕನವರಿಕೆಗೆ
ಪೂರ್ಣ ವಿರಾಮ ಹಾಕಿ ಬಿಡು
ನನ್ನ ಮೈ ಧೂಪ ಹುಡುಕಬೇಡ
ನಾನಿತ್ತ ಆ ನೀಲಿ ಟವಲಿನಲ್ಲಿ
ಸಿಗುವುದಿಲ್ಲ ಸಂದೇಶ
ನಿನ್ನ ಸವರುವ ತಂಗಾಳಿಯಲ್ಲಿ
ಕೊಡುವುದಕೆ ಕೊಂಬುದಕೆ
ಅಭಾವವಿದೆ ಇಲ್ಲಿ
ಹಕ್ಕು ಸ್ಥಾಪನೆಯ ಸಮಯ
ಪ್ರೀತಿಗಿಲ್ಲಿ ಕವಡೆ ಕಿಮ್ಮತ್ತಿಲ್ಲ
ರುಚಿಯಾದ ಮಾಂಸ ತಿಂದು
ತೇಗಿದ ಮೇಲೆ ಅದನ್ನ ಹಿಡಿದಿಟ್ಟ
ಮೂಳೆಗೆ ಬೆಲೆಯಿಲ್ಲ
ಹದ್ದುಗಳು ಎಳೆದಾಡಿ ಕಿತ್ತು ಹೋದ
ನನ್ನ ಸೆರಗು, ಚಿಂದಿ ರವಿಕೆ
ಇಳಿದ ಕಂಬನಿ ಬಿಂದುಗಳು
ಕಂಡದ್ದು ನಿನಗೆ ಮಾತ್ರ
ಜಗತ್ತು ನೋಡಿದ್ದು ಹರಿದ
ಬಟ್ಟೆಯೊಳಗಿನ ದೇಹ ಸಿರಿಯನ್ನ
ಬುದ್ಧನ ನಗು ನೋಡುತ್ತ
ಮೈಮರೆವ ನಿನಗೆ ಇದು
ಅರ್ಥವಾಗದ ಒಗಟು
ಮುಂದೊಮ್ಮೆ ಸ್ವರ್ಗದಲ್ಲಿ
ಸಿಕ್ಕರೆ ಬಿಡಿಸಿ ಹೇಳುತ್ತೇನೆ
ಕಿವಿಗೊಟ್ಟು ಕೇಳಿಸಿಕೋ ಈಗ
ಅಲ್ಲಿ ಭೇಟಿಯಾಗುವವರೆಗೂ
ನಾ ನಿನಗೆ ಬರೀ ಶಾಲ್ಮಲಿಯಷ್ಟೇ





‘ಬುದ್ಧನ ನಗು ನೋಡುತ್ತ ಮೈ ಮರೆವ ನಿನಗೆ, ಅರ್ಥವಾಗದ ಮಾತಿದು…’ ಭಾವಪೂರಿತ ಕವನ ಶಮಾ !
Jayashree, Thanks
Nice to see this poem here. Shama had sent it to me @ my fb inbox seeking my opinion. I liked the poem. Looks like she isn’t very confident about her poetic abilities as yet. I have tendered a bit of advise to her and I have a feeling that she can write good poems.
Sir, ಶಾಲ್ಮಲಿ ಅನ್ನುವ ಗುಪ್ತಗಾಮಿನಿ ಬಹಳಷ್ಟು ವರ್ಷಗಳಿಂದ ನನ್ನೊಳಗೆ ಒಂದು ಬೆರಗಾಗಿ ಉಳಿದಂಥ ರೂಪಕ. ಮೊನ್ನೆ ನಿಮ್ಮ ಶಾಲ್ಮಲಿ ಕಂಡಾಗ ಥಟ್ಟನೇ ಹೊಳೆದಿದ್ದಿದು. ಅದೇ ಕಾರಣಕ್ಕೆ ನಿಮಗೆ ಕಳಿಸಿದೆ. ನಿಮ್ಮ ಹಾರೈಕೆಗೆ ವಂದೇ. ನನ್ನಂಥ ವಿದ್ಯಾರ್ಥಿಗಳಿಗೆ ನಿಮ್ಮಂಥ ಮೇಷ್ಟ್ರುಗಳು ಬೇಕು.
ವಾವ್. ಶಮಾ ಅವರೆ, ನನಗೆ ಈ ಕವನದಲ್ಲಿನ ಆತ್ಮಭಾವ ತುಂಬಾ ಇಷ್ಟವಾಗಿಹೋಯ್ತು. “…. ಕಂಡದ್ದು ನಿನಗೆ ಮಾತ್ರ” ಎಂಬ ನಿವೇದನೆಯ ಆತ್ಮಭಾವ ಹಿಡಿದು ಅಲ್ಲಾಡಿಸುವಂತಹದ್ದು… ಗೌರವಪೂರ್ವಕ ಮೆಚ್ಚುಗೆಗಳು.
ಆತ್ಮ ಭಾವ.. ವಾಹ್.. ಇದು ಕಂಡದ್ದು ನಿಮಗೆ ಮಾತ್ರ ಎನ್ನಲೇ ? ಧನ್ಯವಾದಗಳು
tumbaanE chennaagide Shamakka :)maidhoopa huDukabEDa anta hELtaa, majjegaLu khaaliyaada mEle mooLege beleyilla; hiDidiTTukonDiddu mooLeyaadaroo embantaha maatinalli ondara astittvakke innondu poorakaannO bhaava, nija, jagattu nODuvudu kEvala harida baTTeya paridhiyalli kaaNuva dEhasiri.. antarangada oDanaaDige maatra kaNNeeru maatravalla, adaralli beretiruva nOvina ruchi tiLiyuvudu.. koneyadaagi buddhana nagu nODutta maimareva ninage idu arthavaagada ogaTu annuvaaga, manassomme stabdhavaaguttade.. naa ninage barii shaalmaliyashTE..shamakka 🙂
🙂 🙂 tumbaanE samarthavaagi halavu eLegaLanna bichchiDtaa irO kavite 🙂 🙂 🙂
Thanks Puttanna.
“antarangada oDanaaDige maatra kaNNeeru maatravalla, adaralli beretiruva nOvina ruchi tiLiyuvudu.. ”
Yes. ಅಂಥ ಆತ್ಮಾನುಬಂಧಕ್ಕೆ ಮಾತ್ರ ಅರಿವಾಗುವ ಭಾವವದು ಮತ್ತು ಜಗತ್ತಿಗಿಂತ ಬೇರೆ ದೃಷ್ಟಿಯಲ್ಲಿ ನೋಡಲು ಸಾಧ್ಯವಾಗುವದು. ನಿನ್ನ ನಲ್ಮೆಗೆ ವಂದೇ.