ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ಎಂದೂ ದ್ವೇಷಿಸದ ಅವಳು..

ಇಮ್ತಿಯಾಜ್ ಶಿರಸಂಗಿ 

ಅವಳ
ಸಾಗರದಂತಹ
ವಿಶಾಲ ಹೃದಯದಲ್ಲಿ
ನನ್ನ ಮೇಲಿನ ಕೋಪವೆಂಬ ವಾಯುಭಾರ ಕುಸಿತವಾದ
ದಿನ, ನನ್ನ ಬಾಳ ಸುಡುಬಿಸಿಲ ಮಧ್ಯಾಹ್ನದಲ್ಲಿ ತಂಪು ಗಾಳಿ ಬೀಸುತ್ತಿತ್ತು.

ಮನದ ತೋಟದಲ್ಲಿ
ಬರಿ ಅವಳ ನೆನಪಿನ
ಹೂಗಳೇ ಬೆಳೆದಿರುವಾಗ
ಕ್ಷಮಿಸಿ ಇಲ್ಲಿ ಬೇರೆ ನೆನಪುಗಳಿಗೆ ಜಾಗವಿಲ್ಲ.

ಬಯಸುವ ಮುಂಚೆ ಸಿಕ್ಕಿ ಬಿಡುವ
ಅವಳ ಪ್ರೀತಿ, ಮುಂಗಾರಿಗೂ
ಮುಂಚೆಯೇ ಅರಳಿ ನಿಲ್ಲುವ
ಕೆಂಪು ಗುಲ್ಮಹರ್.

ಅವಳ ಮನದ ಜಿಗಿತವೇ ಕಾರಣ ಮುಳುಗಲು ನನ್ನ ಕನಸಿನ ಹಡಗಿಗೆ.

ನನ್ನ ಕನಸಿಗೂ ಭವಿಷ್ಯ ಗೊತ್ತಾಗಿರಬಹುದು, ನಾ
ನಿನ್ನವನಾಗುವುದಿಲ್ಲವೆಂದು
ಅದಕ್ಕೆ
ಏನೋ, ಕನಸಲ್ಲಿ ಬರಿ ನೀ ಮಾತ್ರ ಬರುತ್ತಿದ್ದಿಯಾ ಮೊದಲೆಲ್ಲ ನಿನ್ನ ಜೊತೆ ನಾನು ಇರುತ್ತಿದ್ದೆ

ಅವಳ ಮೌನದಿಂದಲೇ ಅವಳನ್ನು ಮೆಚ್ಚಿದ್ದ ನಾನು, ಅವಳು ಗಾಢ ಮೌನ ತುಳಿದಾಗ ವಿಲವಿಲ ಒದ್ದಾಡಿ ಹೋದೆ

ನೋವು ಒಪ್ಪಿಕೊಳ್ಳುವುದನ್ನು ಈಗಷ್ಟೇ ಕಲಿಯುತ್ತಿದ್ದೇನೆ ರೂಢಿಯಾಗಿಬಿಟ್ಟರೆ ಜೀವನ ಬಲು ಸುಲಭ

ನನ್ನನ್ನು ಪ್ರೀತಿಸುವಾಗ ಅವಳ ಯಾವ ಷರತ್ತು ಇರಲಿಲ್ಲ,
ಆದರೆ ತೊರೆದು ಹೋಗುವಾಗ
ಮಾತ್ರ ಷರತ್ತುಗಳ ಪಟ್ಟಿ ದೊಡ್ಡದಿತ್ತು.

ಇಬ್ಬರಿಗೂ ಫರಕ್ಕೂ ಬೀಳದ ಇ ಬೇರ್ಪಡಿಕೆಯಲ್ಲಿ ಮಜಾ ವಾದರೂ ಎಲ್ಲಿದೆ, ಹೇಳಿ..

‍ಲೇಖಕರು Avadhi

25 February, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading