ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ಅರಿಯೇ…

ಜಿ ಲೋಕೇಶ

ದಾರಿ ಬದಿಯ
ಕೊಳಚೆ ನೀರೆ
ಅಷ್ಟು ಗಲೀಜು
ಎನಿಸಿಕೊಂಡರೆ
ಎದೆಯ ಅಸಹನೆ
ಅದೆಷ್ಟು ಕೊಳಕಾಗಿರಬಹುದು
ಹರಿದು ಹೋಗಲು
ಅನುವು ಮಾಡಿಕೊಡದೆ
ದಿನವು ಕಟ್ಟೆ ಕಟ್ಟಲು
ನೆರವಾಗುವ
ನಿನ್ನದಲ್ಲದ
ಭಾವಗಳ
ಕಂಬಿಗಳ
ನಡುವೆ ಕಾಂಕ್ರಿಟು
ಸುರಿದುಕೊಳ್ಳುವ
ಹಟವೇನೋ ನಾ ಅರಿಯೆ!

ಚಿಕ್ಕದೊಂದು
ಕಡ್ಡಿಯಿರಿಸು
ಹನಿಯಂತೆಯೋ
ಸರಾಗವಾಗಿಯೋ
ಹರಿದು ನಿರುಮ್ಮಳನಾಗಲಿ
ಎದೆಯ ಭಾವಗಳ
ಪ್ರೀತಿ ಬಿಸಿಲಿಗೊಡ್ಡಿ
ನಿಲ್ಲು
ಚೆಲ್ಲಲಿ
ನೆಲದ ಕಲ್ಲು ಸಹ
ಹೊಳಪು
ತರಚು ಗಾಯವಷ್ಟೇ
ಮಾಗಿ ಬಿಡಲಿ
ಕೆರೆದು ಹುಣ್ಣಾಗಿಸಿಕೊಂಡರೆ
ಫಲವೇನೋ ನಾ ಅರಿಯೆ!

ದಾಟಿ ಬಿಡು
ಹೆಜ್ಜೆಗಳಿನ್ನು
ಹಲವು ಉಳಿದಹವು
ಕಾಲು ನೋಯಿಸಿಕೊಳ್ಳುವ
ಹಿತವೇನೋ
ತಳವೂರಿ
ನಿಂತ ಜಾಗದಲ್ಲೇ
ತಾಳ್ಮೆಯ ಸ್ಪರ್ಶವು
ಹಿಡಿದ ಬೆರಳನ್ನು
ಕಳಚಿಕೊಂಡು ಸಾಗಿದಾಗ
ನಾಳೆ ನೆನೆದು
ಕಣ್ಣೀರಿಗೆ
ಕೆಲಸವಿಯ್ಯುವ
ಜವಬ್ದಾರಿಯೇನೋ ನಾ ಅರಿಯೆ!

‍ಲೇಖಕರು Admin

3 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading