ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾವಿನ್ನೂ ಬದುಕಿದ್ದೇವೆ…

ಆರ್ ಎನ್ ದರ್ಗಾದವರ

ನಿಮ್ಮನೆ ಬಚ್ಚಲು ನೀರು
ತಂಟೆ ತಗೆದು ನಿಂತುಕೊಂಡಿದ್ದರೆ
ನಿಮ್ಮನೆ ಅಂಗಳದಲ್ಲಿ
ಈ ದರಿದ್ರ ಕತ್ತಲು
ಗೂಡಚರ್ಯೆ ನಡೆಸುತ್ತಿದ್ದರೆ
ನಿಮ್ಮ ಪಾಪದ ಹೆಜ್ಜೆಗಳು
ಸಾಕ್ಷಿ ಹೇಳಲು ತಡಬಡಿಸುತ್ತಿದ್ದರೆ

ನಮಗೆ ಹೇಳಿ,
ನಾವಿನ್ನೂ ಬದುಕಿದ್ದೇವೆ

ಭೂಮಿಯ ಒಡಲು ಹೊಕ್ಕು
ಕಕ್ಕಸ ಮೇಲೆತ್ತುವಂತಿದ್ದರೆ
ಗಾಳಿ ಮಾತಿಗೆ ಗಂಟಲರಳದೆ
ಮನದುದ್ದಕ್ಕೂ ಉಬ್ಬು-ತಗ್ಗು
ಅಡ್ಡಡ್ಡಲಾಗಿ ಮಲಗಿಕೊಂಡಿದ್ದರೆ
ಅಣುಕಿಸುವ ನಟ್ಟಿರುಳಿನ ಬಿಂಬದಲಿ
ತಲೆದಿಂಬು ಕೇಳಿಸಿಕೊಳ್ಳದ ಮಾತುಗಳಿದ್ದರೆ
ದಹಿಸುವ ಮೊದಲು ನಮಗೆ ಹೇಳಿ

ತೂತುಬಿದ್ದ ಕೊಡ,
ಆಕಾರತಪ್ಪಿದ ಪಾತ್ರೆಗಳು,
ನಿನ್ನೆ ತಿಂದುಳಿದ ಅನ್ನ
ಬೆರೆಯದೇ ಬೇರ್ಪಟ್ಟ ಸಾರು
ಅಂಡಿನಲಿ ಕಿಂಡಿಯಾದ ನಿಮ್ಮ ಮಕ್ಕಳ
ಬಟ್ಟೆ
ಜೋಡಿ ಅಲ್ಲದ ಚಪ್ಪಲಿ
ಕಲರ್ ಕಿತ್ತ ಹೆರ್ಪಿನ್,
ತಿಜೂರಿಯಲಿ ಅನಾಥವಾದ,
ಬ್ಲೌಜ್ಗೆ ಮ್ಯಾಚಾಗದ ಸೀರೆ
ಬೆಂಡಾದ ಬಾಚಣಿಕೆ
ಹೊಸ್ತಿಲದೊಳಗೆ ಕಟ್ಟಿ ಹಾಕಿದ
ಸಂತೋಷದ ತುಣುಕುಗಳನ್ನು
ನಮಗೂ ಹಂಚಿ
ಹೆಣಭಾರವೇ ಹೆಗಲ ಮೇಲೆ ಹೊತ್ತಿರುವಾಗ
ನಿಮ್ಮ ನಿನ್ನೆಗಳನ್ನು

ನಮಗೆ ಹೇಳಿ,
ನಾವಿನ್ನೂ ಬದುಕಿದ್ದೇವೆ

‍ಲೇಖಕರು Admin

29 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading