ಒಂದೇ ಆಯಾಮದ ಬಿಂದುಗಳು ಮತ್ತು ಇತರ ಹ್ಯಾಂಗೋವರ್ “ಕವಿತೆಗಳು”
– ಸುಖೇಶ್
ಅಸ೦ಗತ
ಮನೆ ತುಂಬಾ ಮಕ್ಕಳಿರಲಿ
ಆದರೆ ಮೊದಲು ಮದುವೆ ಆಗಿ
ನನಗೆ ಇಂತಾದ್ದೊಂದು ಹೆಡ್ ಫೋನು ಬೇಕು
ಒಳಗಿನ ಶಬ್ದಗಳೆಲ್ಲ ಸತ್ತು ಹೋಗಿ
ಬರಿದೆ ಹೊರಗಣ ಸದ್ದು ಕೇಳಬೇಕು
ನಿನ್ನೆ ಕನಸಲ್ಲಿ ಬರೆದಿಟ್ಟ ಎರಡು ಸಾಲುಗಳು
ಕಳೆದುಬಿಟ್ಟಿವೆ
ಬರೆದದ್ದು ನಾನೋ ನೀನೋ?
ಮೊನ್ನೆ ಸಾಲುಗಳಲ್ಲಿ ಕಟ್ಟಿಟ್ಟ ಕನಸೊಂದು
ಹ್ಯಾಂಗೋವರಲ್ಲಿ ಮಲಗಿಬಿಟ್ಟಿದೆ
ಕುಡಿದದ್ದು ನೀನೋ ನಾನೋ?
ನನ್ನ ಕನಸುಗಳಲ್ಲಿ ನಿನ್ನ ಹೆಜ್ಜೆಗುರುತು
ಅಳಿಸಬೇಕೆಂದರೆ ಈಗ್ಯಾವ ತೆರೆಗಳ ಹುಡುಕಲಿ?
ನಾಳೆ ಮತ್ತೆ ಬಂದು ಹೋಗುವೆಯಾ please?
ಬರಿದೇ ಗುರುತುಗಳ ಉಳಿಸಿದ್ದಕ್ಕೆ ಕಾರಣ ಬೇಕಾಗಿದೆ.
]]>






nimma kaviteglu tumba chennagive.
kavitegalu chennagive.