ನಾನ್ಯಾಕೆ ಮಾಡಲಿ ಧ್ಯಾನ?

ರವಿ ಸಿದ್ಲಿಪುರ

ಸುಳ್ಳು ಹೇಳಿಲ್ಲ,
ಮೋಸ ಮಾಡಿಲ್ಲ,
ಕಳ್ಳತನ ಅಂದ್ರೆ
ಏನೂಂತ ಗೊತ್ತಿಲ್ಲ!
ಇವುಗಳನ್ನು ಮಾಡದ
ಮೇಲೆ, ನಾನ್ಯಾಕೆ
ಮಾಡಲಿ ಧ್ಯಾನ?

ಮದುವೆಯಾಗಿ
ಹೆಂಡತಿ ಬಿಟ್ಟಿಲ್ಲ,
ಮನೆ, ಮಕ್ಕಳು
ಅಂಥ ರೋಸಿ ಹೋಗಿಲ್ಲ,
ತಾಯಿತಂದೆಯರನ್ನೂ
ದೂರ ಇಟ್ಟಿಲ್ಲ,
ಅವರನ್ನು ಮಾತಾಡಿಸಲು
ಹೋಗುವಾಗ ಕ್ಯಾಮಾರಾ
ತಗೊಂಡು ಹೋಗಲ್ಲ,
ಹೀಗಿರುವಾಗ, ನಾನ್ಯಾಕೆ
ಮಾಡಲಿ ಧ್ಯಾನ?

ಕಲಿಸುವಾಗ
ಧರ್ಮ, ಜಾತಿ, ಲಿಂಗಗಳನು
ನೋಡಲ್ಲ,
ಯಾರನ್ನೂ ಯಾವುದರ
ಮೇಲೂ ಎತ್ತಿಕಟ್ಟಿಲ್ಲ,
ಪ್ರತಿ ವಿಚಾರಗಳು
ಬಹುತ್ವವನ್ನೇ ಉಸಿರಾಡುತ್ತಿರುವಾಗ,
ನಾನ್ಯಾಕೆ ಮಾಡಲಿ ಧ್ಯಾನ?

ಕಂಡಕಂಡ ದೇವಾಲಯಗಳ
ಸುತ್ತಿಲ್ಲ,
ಪವಿತ್ರ ನದಿಗಳಲ್ಲಿ
ಮಿಂದಿಲ್ಲ,
ಗುರುಸ್ವಾಮಿಗಳ
ಪಾದಗಳಿಗೆ
ದೀರ್ಘದಂಡ ಹೊಡೆದಿಲ್ಲ,
ನನ್ನ ಪಾಲಿನ
ಕೆಲಸವನ್ನು ನಿಷ್ಠೆಯಿಂದ
ಮಾಡುತ್ತಿರುವಾಗ,
ನಾನ್ಯಾಕೆ ಮಾಡಲಿ ಧ್ಯಾನ?

ಲೋಕ ಕಲ್ಯಾಣಕ್ಕಾಗಿ
ಸಕಲವನ್ನೂ
ತೊರೆದು, ಶುದ್ದುಳ್ಳವರು
ಮಾಡಲಿ ಧ್ಯಾನ!
ಮನಸ್ಸು ಲೌಕಿಕದ
ಭೋಗ, ಆಸೆ, ತೃಷೆಗಳನ್ನು
ಬಯಸುವಾಗ
ಅವುಗಳನ್ನು ಮುಚ್ಚಿಟ್ಟುಕೊಂಡು,
ನಾನ್ಯಾಕೆ ಮಾಡಲಿ ಧ್ಯಾನ?

ಒಂದಿಷ್ಟು ಓದು,
ನೋವಿಗೆ ಮಿಡಿವ
ಹೃದಯವಿರುವಾಗ,
ಬಲವಿರುವವರೆಗೂ
ಬಂದ ಕಾರ್ಯ ಮುಗಿಸುವ
ದಾರಿ ಕಣ್ಣೆದುರಿಗೆ ಇರುವಾಗ,
ನಾನ್ಯಾಕೆ ಮಾಡಲಿ ಧ್ಯಾನ?

ಕಣ್ಣೆದುರಿಗಿನ ಯುವಸಮಾಜ
ಕತ್ತಲ ಹರಸಿ
ನಡೆವುದನ್ನು ತಿಳಿದೂ,
ನನ್ನ ಒಳಗನ್ನು
ಪರಿಶುದ್ಧ ಮಾಡಿಕೊಳ್ಳಲು
ನಾನ್ಯಾಕೆ ಸೇರಿಕೊಳ್ಳಲಿ
ಗುಹೆ?
ಬಾಳಿನ ಜವಾಬ್ದಾರಿಗಳಿರುವಾಗ
ನಾನ್ಯಾಕೆ
ಮಾಡಲಿ ಧ್ಯಾನ?

‍ಲೇಖಕರು Avadhi Admin

May 22, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಮಮತ

    Soooooper…
    ಎಲ್ರು ಇದ್ನ ಅರ್ಥ ಮಾಡ್ಕಂಡ್ರೆ , ಎಷ್ಟೋ ಮನೆಗಳು, ಸಂಸಾರಗಳು ನೆಮ್ಮದಿಯಾಗಿರ್ತವೆ. ಹಂಗೆ ಉದ್ದಾರ ಆಗ್ತವೆ.

    ಈ ಪದ್ಯ ಒಂಥರಾ ” ಎಲ್ಲೊ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ” ಹಿಂಗಿದೆ….

    ಪ್ರತಿಕ್ರಿಯೆ
  2. ರಾಧ hm

    ನಿಮ್ಮ ಕಾವ್ಯ ಕ್ಷೇತ್ರದ ಆಸಕ್ತಿ ಬರಹ ಮೆಚ್ಚುವಂತಹದು,ಆದರೆ ನಿಮ್ಮ ಲೇಖನ ಬರಹ ನನಗೆ ಹೆಚ್ಚು ಆಪ್ತವಾಗುತ್ತದೆ… .. ಇನ್ನು ಹಲವು ಸಮಾಜಮುಖಿ ಚಿಂತನೆಯ ಲೇಖನಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೇನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: