ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನೂ ಚಿಟ್ಟೆಯಾಗಿ ಬಂದರು ಸಿಗದ ನೀನು…

ಒಂದು ಇಬ್ಬನಿಯ ಬೆಳಗು

20150321_121002_resized_6

ಬಿದಲೋಟಿ ರಂಗನಾಥ್

images
ಹಿಡಿಯಲು ಬಂದಾಗಲೆಲ್ಲಾ
ಹಾರುತ್ತ ಹಾರುತ್ತಾ ಕೂತುಬಿಡುತ್ತಿದ್ದೆ
ರೆಕ್ಕೆ ಎತ್ತಿ ,ಯಾವದೋ ಗಿಡದ ಮೇಲೋ
ಗೋಡೆಯ ಕಚ್ಚಿಯೋ
ನಿನ್ನ ನೋಡಿದಾಗಲೆಲ್ಲ
ನನ್ನೊಳಗೆ ನನ್ನವಳ ಬಾವ ಕಚಗುಳಿ ಇಡುತ್ತಿತ್ತು
ನಾನೂ ಚಿಟ್ಟೆಯಾಗಿ ಬಂದರು ಸಿಗದ ನೀನು
ನಾಚಿಕೊಂಡು ಹಾರುತ್ತಲೇ ಇದ್ದೆ.
ನನ್ನೊಳಗೆ ಬಣ್ಣ ಬಣ್ಣದ ಕನಸುಗಳು
ಮೈ ತುಂಬಿಕೊಳ್ಳುತ್ತಾ ,ನೀನಾರುವ ಹೆಜ್ಜೆ ಗುರುತಿಗೆ
ಹೂವ ಚೆಲ್ಲುತ್ತಿದ್ದೆ
ಅಂಗೈಲಿಡಿದು ಕಣ್ಣುಗಳಲ್ಲಿ ಮಾತಾಡಿಸುತ್ತಿದ್ದೆ
ಮನಸಿಗೆ ಕಾಡಿದ ನೀನು
ನಿದ್ದೆ ಕೆಡಿಸಿದೆ ಅನ್ನ ಬಿಡಿಸಿದೆ
ನಿನ್ನದೇ ಧ್ಯಾನ ನನ್ನ ಭಾಗಕ್ಕೆ ಬಂದ ಸ್ವತ್ತಾಯಿತು.
ನನ್ನ ಕಣ್ಣಿಗಳು ನಿನ್ನದೇ ನೋಟದ ಸೆಳೆತಕೆ
ಬಾಯಾರುತ್ತಲೇ ಇದ್ದವು!
ಬಾವ ಬಿಂದು ಚಿಲುಮೆಯಾಗಿತ್ತು.
ಒಂದು ಇಬ್ಬನಿಯ ಬೆಳಗು
ಕೈ ನೀಡಿ ಅಂಗೈ ಆಕಾಶದತ್ತ ಮುಖ ಮಾಡಿದ್ದೆ
ಅದಲ್ಲಿಂದಲೋ ಹಾರಿ ಬಂದ ನೀನು
ನನ್ನ ತೋರು ಬೆರಳ ತುದಿಯ ಮೇಲೆ
ರೆಕ್ಕೆ ಎತ್ತಿ ಕೂತು ಬಿಟ್ಟಿದ್ದೆ
ಕನಸುಗಳ ಗೂಡು ಕಟ್ಟಿಕೊಂಡು
ನನ್ನ ಮನದಲ್ಲಿ ಪ್ರೀತಿಯ ಮೊಗ್ಗರಳಿಸಿ.

‍ಲೇಖಕರು G

14 September, 2015

3 Comments

  1. Jayashree

    ಕವನ ಚೆನ್ನಾಗಿದೆ

  2. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ , ಪದ್ಯ.

  3. Noorulla thyamagondlu

    ಕವನ ಚೆನ್ನಾಗಿದೆ ರಂಗೂ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading