ಒಂದು ಸ್ವಗತ

ಅನುವಾದ: ಜಾನ್ ಸುಂಟಿಕೊಪ್ಪ.
ಕೊಂಕಣಿ ಮೂಲ: ಸುನಿಲ್ ಕ್ರಾಸ್ತಾ
ಕೊಂಕಣಿ ಮೂಲ: ಸುನಿಲ್ ಕ್ರಾಸ್ತಾ
ನಾನು
ಮತ್ತೆ ಹೊರಡಬೇಕಿದೆ….
ಈ ಊರು ಕೇರಿ ದೇಶ ಬಿಟ್ಟು
ದೂರ ಹೊರಡಬೇಕಿದೆ;
ಕತ್ತಲು ಕವಿದ ಈ ರಾತ್ರಿ
ನಿದ್ದೆಯಿಲ್ಲದೆ ಕಳೆಯಬೇಕಿದೆ
ಕರುಣೆಯಿಲ್ಲದ ಕಣ್ಣೀರು ಬಸಿದು
ಇಂದೇ ಉಸಿರಾಡಬೇಕಿದೆ
ನಾನು ಮತ್ತೆ ಹೊರಡಬೇಕಿದೆ;
ಮೊನ್ನೆ ಸುರಿದ ಮಳೆಯ ತಂಪು
ಒದ್ದೆ ಇಳೆಯ ಮಣ್ಣ ಕಂಪು
ಜೀವದ ಜೀವ ಪ್ರೀತಿಯ ಬಿಂಬ
ಅವಳ ಒಡಲಲಿ ಬೆಚ್ಚನಿರುವಾಗ
ಎಲ್ಲಾ ಬಿಟ್ಟು ಹೊರಡಬೇಕಿದೆ
ನಾನು ಮತ್ತೆ ಹೊರಡಬೇಕಿದೆ;ಇಳೆಯನು ತಬ್ಬಿದ ಕತ್ತಲಿನಲ್ಲಿ
ಹೃದಯವ ಬಿರಿವ ನೋವಿನಲ್ಲಿ
ಆಗಸವೆಲ್ಲಾ ತಡಕಾಡುತಿರಲು
ಬೆಳಕು ಬೀರಿ ಹಾರುವ ವಿಮಾನ
ನಾಳೆ ನಾನೂ ಹಾರಬೇಕಿದೆ
ಸುಡುವ ಮರಳಲಿ ನರಳಿ ನರಳಿ
ಮಮತೆ-ಪ್ರೀತಿ ಪಕ್ಕಕ್ಕೆಸೆದು
ದಿನಾರಿಗಾಗಿ ಬಾಳಬೇಕಿದೆ
ನಾಳೆ ಮತ್ತೆ ಹೊರಡಬೇಕಿದೆ;
ಮತ್ತೆ ಹೊರಡಬೇಕಿದೆ….
ಈ ಊರು ಕೇರಿ ದೇಶ ಬಿಟ್ಟು
ದೂರ ಹೊರಡಬೇಕಿದೆ;
ಕತ್ತಲು ಕವಿದ ಈ ರಾತ್ರಿ
ನಿದ್ದೆಯಿಲ್ಲದೆ ಕಳೆಯಬೇಕಿದೆ
ಕರುಣೆಯಿಲ್ಲದ ಕಣ್ಣೀರು ಬಸಿದು
ಇಂದೇ ಉಸಿರಾಡಬೇಕಿದೆ
ನಾನು ಮತ್ತೆ ಹೊರಡಬೇಕಿದೆ;
ಮೊನ್ನೆ ಸುರಿದ ಮಳೆಯ ತಂಪುಒದ್ದೆ ಇಳೆಯ ಮಣ್ಣ ಕಂಪು
ಜೀವದ ಜೀವ ಪ್ರೀತಿಯ ಬಿಂಬ
ಅವಳ ಒಡಲಲಿ ಬೆಚ್ಚನಿರುವಾಗ
ಎಲ್ಲಾ ಬಿಟ್ಟು ಹೊರಡಬೇಕಿದೆ
ನಾನು ಮತ್ತೆ ಹೊರಡಬೇಕಿದೆ;ಇಳೆಯನು ತಬ್ಬಿದ ಕತ್ತಲಿನಲ್ಲಿ
ಹೃದಯವ ಬಿರಿವ ನೋವಿನಲ್ಲಿ
ಆಗಸವೆಲ್ಲಾ ತಡಕಾಡುತಿರಲು
ಬೆಳಕು ಬೀರಿ ಹಾರುವ ವಿಮಾನ
ನಾಳೆ ನಾನೂ ಹಾರಬೇಕಿದೆ
ಸುಡುವ ಮರಳಲಿ ನರಳಿ ನರಳಿ
ಮಮತೆ-ಪ್ರೀತಿ ಪಕ್ಕಕ್ಕೆಸೆದು
ದಿನಾರಿಗಾಗಿ ಬಾಳಬೇಕಿದೆ
ನಾಳೆ ಮತ್ತೆ ಹೊರಡಬೇಕಿದೆ;
ಬಾಡಿದ ಅವಳ ಮೊಗವ ಕಂಡು
ಬರಸೆಳೆಯಬೇಕಿದೆ,
ಬಿಸಿಬಿಸಿ ಕಣ್ಣೀರನೊರೆಸಿ ಒಂದು
ಸವಿಮುತ್ತ ನೀಡಬೇಕಿದೆ
ನಾನು,..
ನೋವ ಮರೆತು ನಗಬೇಕಿದೆ
ಮತ್ತೆ ಹೊರಡಬೇಕಿದೆ;
ಭಾವನೆಗಳಿರದ ಟಿಕ್ ಟಿಕ್ ಮುಳ್ಳು
ಕರುಣೆಯಿಲ್ಲದೆ ನರಳುತಿರಲು
ಕಾಲನ ಕರೆಗೆ ಹೆಜ್ಜೆಯನಿರಿಸಿ
ಸುಮ್ಮಗೆ ನಡೆಯಬೇಕಿದೆ
ನಾನು ಮತ್ತೆ ನಡೆಯಬೇಕಿದೆ..





ಜಾನ್ರವರಿಗೆ ವಂದನೆಗಳು
’ನಾನು ಮತ್ತೆ ಹೊರಡಬೇಕಿದೆ’ ಒಂದು ಅರ್ಥಪೂರ್ಣ ಅನುವಾದ ’ ಕಾಲನ ಕರೆಗೆ ಹೆಜ್ಜೆಯನಿರಿಸಿ…ಸುಮ್ಮಗೆ ನಡೆಯಬೇಕಿದೆ….ನಾನು ಮತ್ತೆ ನಡೆಯಬೇಕಿದೆ’ ಮನ ಮುಟ್ಟುವ ಸಾಲುಗಳು.