ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಮತ್ತು ಗಾಂಧಿ…

download (1)
ಬಿದಲೋಟಿ ರಂಗನಾಥ್

ಮಧ್ಯ ರಾತ್ರಿ ಎದ್ದೆ
ಮಹಡಿಯ ಮೇಲೆ ಒಬ್ಬನೇ ಕೂತೆ
ಬೀಸುವ ತಂಗಾಳಿ ಹಿತವೆನ್ನಿಸುತ್ತಿತ್ತು
ಇಡೀ ನಗರವೇ ಸ್ಥಬ್ಧ, ಆದರೆ
ಅಲ್ಲೊಂದು ಇಲ್ಲೊಂದು ನಾಯಿ ಘೀಳಿಡುವ ಸದ್ದು.ಅದೋ
ಮೌನ ಮುರಿದ ಕ್ರಾಂತಿ
ಸುಮ್ಮನೇ ಹೊರಟೆ
ರಸ್ತೆಯಲಿ ನಡೆದು…
ಬೊಚ್ಚು ಬಾಯಿ, ಸಣಕಲು ದೇಹ
ಕೈಯಲ್ಲಿ ಕೋಲಿಡಿದು ಸರಸರನೆ ಬರುತ್ತಿದೆ ಒಂದಜ್ಜ
1
ನಾನೇ ಕೇಳಿದೆ :ಮೌನ ಮುರಿದು
ಯಾರು ?ನೀವು
ನಾನಪ್ಪ” ಗಾಂಧಿ”
“ಇಟೊತ್ತಲ್ಲಿ “ಅದು ಇಲ್ಲಿ.
ಒಬ್ಬರೇ ಓಡಾಡೊದನ್ನ ನೋಡನ ಅಂತ ಬಂದೆ .
ಸ್ವರ ವ್ಯಂಗ್ಯವಿತ್ತು.
ಅಜ್ಜ ನಾನೊಬ್ಬ ಪಂಚಮ
ಸಿಕ್ಕಿಲ್ಲ ಇನ್ನೂ ಸಾಮಾಜಿಕ ಸಮಾನತೆ
ತಲೆಗೆ ನಿದ್ದೆಯತ್ತುತ್ತಿಲ್ಲ ಇದೇ ಚಿಂತೆಯಲಿ ಅಂದೆ.
“ಮೂಢರ ಮನಸಿನ ಮೇಲೆ
ಮಳೆ ಹೊಯ್ಯದ ಹೊರತು
ಅದು ಕನಸಿನ ಮಾತು”
ಅಂದ ಅಜ್ಜ ,ಬಗಲಲಿ ಇದ್ದ ಚೀಲಕೆ
ಕೈ ಇಳಿ ಬಿಟ್ಟು ,ಅರೆಬೊಗಸೆ ಕಡಲೆಬೀಜ ಕೊಟ್ಟಿತು.
ಬೀದಿಯಲಿ ಯಾರೊಬ್ಬರೂ ಸುಳಿವೂ ಇಲ್ಲ.
ಸ್ವತಂತ್ರದ ಬಾವುಟ ಹಾರುತಿದೆ
ಸಿರಿವಂತರ ಮಹಡಿಗಳ ಮೇಲೆ
ಅಲ್ಲೆ ಸಮೀಪದಲ್ಲಿ ಮುಲುಕುವ ದನಿ
ಕೇಳಿ ಬರುತ್ತಿದೆ.
ಇಬ್ಡರೂ ಹೊರಟೆವು ಅತ್ತ ಕಡೆಯೆ
ಅಲ್ಲೊಬ್ಬ ಹೆಂಗಸು ಮಲಗಿದ್ದಾಳೆ
ಮೂಕಿಲ್ಲದ ಗಾಡಿ ಅಡಿಯಲ್ಲಿ
ಚಿಂದಿ ಆದ ಅರೆ ಬರೆ ಬಟ್ಟೆಯಲಿ
ಮೈ ಇಣುಕುತ್ತಿದೆ ಅಲ್ಲಲ್ಲಿ
ನೋಡಪ್ಪ ಇದೇ ನಮಗೆ
ಸಿಕ್ಕಿರುವ ಸ್ವತಂತ್ರ ಅಂದ ಅಜ್ಜನ ಕಣ್ಣಲ್ಲಿ ನೀರು !
ಅಲ್ಲೆ ಅಣತಿ ದೂರದಲ್ಲಿ ನಿದ್ದೆ
ಮಾಡುತ್ತಿದ್ದವರ ಮನೆಯ ಮೇಲೆ
ಹಾರಾಡುತ್ತಿದ್ದ ಬಾವುಟ ಮುಸ ಮುಸನೆ ನಗುತ್ತಿತ್ತು.

‍ಲೇಖಕರು G

15 August, 2015

2 Comments

  1. Noorulla Thyamagondlu

    ಚೆಂದಿದೆರಿ ರಂಗೂ ಕವಿತೆ.ಸ್ವಾತಂತ್ರ್ಯ ದಿನದ ಶುಭಾಶಯಗಳು.

  2. Hanumanth Ananth Patil

    ಬಿದಲೋಟಿ ರಂಗನಾಥರವರಿಗೆ ವಂದನೆಗಳು
    ಒಳ್ಳೆಯ ಸಾಂಧರ್ಭಿಕ ಕವನ ಗಾಂದೀಯೊಡನೆರ ನಿಮ್ಮ ಮುಖಾಮುಖಿ ಸಂಬಾಷಣೆ ಈಗಿನ ಭಾರತ ಕುರಿತ ಅವರ ಅಬಿವ್ಯಕ್ತಿ ಎಲ್ಲ ಸೊಗಸಾಗಿ ಪಡಿಮೂಡಿವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading