ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಪಾದ ಊರಿದಲ್ಲಿ ಹಸಿರು ಹುಟ್ಟಲೇ ಬೇಕು..

ಸುನಂದಾ ಕಡಮೆ

ಹೊಗೆ ಹೆಂಚಿನ ಹೊದಿಕೆಯಲ್ಲಿ ನನ್ನ ಬಾಲ್ಯದ ಮೆಲುಕು
ಕಾಲುದಾರಿ ಕನಸಿನೊಳಗೆ ತಡೆಯಿಲ್ಲದ ಸಾಗು

ಚಿಲಕವಿಲ್ಲದ ದ್ವಾರದಲ್ಲಿ ಅವ್ವ ಮಡಿಲ ಜೀಕು
ಏರು ಪಯಣದ ಆಸರೆಯೊಳಗೆ
ಹಿಡಿದು ಕಟ್ಟಿದ ಮಿನುಗು

ನೊಂದ ಕಣ್ಣ ಬಿಂಬದಲ್ಲಿ
ಬೇಡ ಈ ತ್ರಿಶಂಕು
ಇಳಿವ ಮನೆ ಮೆಟ್ಟಿಲಲ್ಲೇ
ತೂರಿಸಬೇಡಿ ಮೂಗು

ಬಣ್ಣ ಮಾಸಿದ ಗೋಡೆಯಲ್ಲಿ
ಇನ್ನೂ ಮಿಕ್ಕಿದೆ ಬೆಳಕು
ಕದ ಮುಚ್ಚಿದ ಕತ್ತಲೊಳಗೆ
ಇಣುಕಬೇಕು ಬೆಳಗು

ಸಧ್ಯ ನನ್ನವ್ವನ ಕೂಲಿಯಲ್ಲಿ
ಹಸಿವು ನೀಗಿದರೆ ಸಾಕು
ಕಾಲ್ತೊಡೆಗಳ ಬೆತ್ತಲು ನಾನು
ನನ್ನೊಳಗಿನ ಬೆರಗು

ಯಾರಿದ್ದೀರಿ ಜಗದೊಳು
ಕಲಿಸಿ ಅಕ್ಷರ ನಾಕು
ಚಿತ್ರಬಂಧ ಮುರಿದು ನೋಡಿ
ಸಾಟಿಯಿಲ್ಲದ ಮಾಗು

ಹೆಣ್ಣೊ ಗಂಡೊ ಕುತೂಹಲವೇಕೆ
ಸಾಕು ಮಾಡಿ ಸೋಗು
ನಾನು ಪಾದ ಊರಿದಲ್ಲಿ
ಹಸಿರು ಹುಟ್ಟಲೇ ಬೇಕು

। ಈ ಫೋಟೋ ನನ್ನೊಳಗೆ ಇಷ್ಟೆಲ್ಲಾ ಹುಟ್ಟುಹಾಕಿತು ।

‍ಲೇಖಕರು Avadhi GK

20 March, 2018

1 Comment

  1. nutana doshetty

    naanu paada ooridalli hasiru huttabeku.

    .chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading