ಬಿ ಎಂ ಬಷೀರ್
ನನ್ನನ್ನು ಸಹಿಸಿ ಕೊಳ್ಳಲಾಗದ ಮೌಲ್ವಿ
ಒಂದು ದಿನ
ಬೆತ್ತ ಹಿಡಿದು ಬಲವಂತದಿಂದ
ಮದರಸದಿಂದ ಹೊರ ದಬ್ಬಿದ!
ನನ್ನ ಅಧ್ಯಾತ್ಮದ ಕಲಿಕೆ
ಅಲ್ಲಿಂದಲೇ ಆರಂಭವಾಯಿತು
****
ಏರ್ ಟೆಲ್ ಟವರ್
ಮೇಲೆ ಕುಳಿತ
ರೆಕ್ಕೆ ಹರಿದ ಒಂಟಿ ಗುಬ್ಬಚ್ಚಿ
ಹಲೋ ಹಲೋ ಎಂದು ಚೀರುತ್ತಿತ್ತು
ಅತ್ತ ಕಡೆಯಿಂದ
ನಾಟ್ ರೀಚಬಲ್ ಸದ್ದು
ಕೇಳಿ ಬರುತ್ತಿತ್ತು !
****
ಚದುರಿದ ದಾಳಿಂಬೆ
ಹಣ್ಣಿನ
ಮಣಿಗಳ ಮರು ಜೋಡಿಸಲು
ಕುಳಿತೆ
ಒಂದು ಹಣ್ಣನ್ನು
ಜೋಡಿಸುವಷ್ಟರಲ್ಲಿ
ನಾನು ಹಣ್ಣಾಗಿದ್ದೆ
0 ಪ್ರತಿಕ್ರಿಯೆಗಳು