ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೆ ಬದುಕಿದವರು

-ನಟರಾಜ ಕುಂಬಾರ

ಬದುಕಿದ್ದೂ ಸತ್ತವರು

ಇಲ್ಲಿ ಅನೇಕರು-

ಯಾವಾಗಲೋ ಸತ್ತುಹೋಗಿದ್ದಾರೆ.
ಇಲ್ಲವೇ ಸತ್ತಂತೆ ಬದುಕುತ್ತಿದ್ದಾರೆ.
ಆದರೂ ಎಲ್ಲೋ ಅಲ್ಲೊಬ್ಬರು
ಇಲ್ಲೊಬ್ಬರು ಬದುಕಿದ್ದಾರೆ.

ಹೀಗೆ ಬದುಕಿದವರು-

ಸಾಯುತಿರುವವರನು
ಸಾಯದಂತೆ ತಡೆಯಲು ಹೆಣಗುತ್ತಿದ್ದಾರೆ.
ಈಗಾಗಲೇ ಸತ್ತವರ ಬದುಕಿಸಲು
ಸಂಜೀವಿನಿ ಹುಡುಕುತ್ತಿದ್ದಾರೆ.

ಆದರೆ ವಿಚಿತ್ರ ನೋಡಿ-

ಬದುಕಿರುವವರನ್ನೇ ಸಾಯಿಸಲಾಗುತ್ತಿದೆ.
ಈ ಸಾಯಿಸುವವರೇ ಬದುಕುತ್ತಿದ್ದಾರೆ.
ಬದುಕಿಸಬೇಕೆನ್ನುವವರೇ ಸಾಯುತ್ತಿದ್ದಾರೆ.
ಸತ್ತಂತೆ ಬದುಕಿರುವವರಂತೂ
ಸಾಯಿಸುತ್ತಿರುವವರ ಗುಂಪನ್ನು
ಎಂದೋ ಸೇರಿಯಾಗಿದೆ.

ಆದರೂ ಎದೆಗುಂದದೆ ಬನ್ನಿ-

ಬದುಕಿಗಾಗಿ ಯುದ್ಧ ಮಾಡೋಣ.
ನಾವೂ ಬದುಕಿ ಸತ್ತವರನ್ನೂ,
ಸತ್ತಂತಿರುವವರನ್ನೂ ಬದುಕಿಸೋಣ.

‍ಲೇಖಕರು Admin

15 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading