ನಾಟಕ ಸಾಹಿತ್ಯ ಸಂವೇದನಾ ಶಿಬಿರಕ್ಕೆ ಆಹ್ವಾನ

ಕರ್ನಾಟಕ ಸಾಹಿತ್ಯ ಅಕಾಡೆಮಿಯು 2015ರ ಜುಲೈ 14, 15 ಮತ್ತು 16 ರಂದು ದಾವಣಗೆರೆಯ ಬಳಿಯ ದೊಡ್ಡ ಬಾತಿಯ ತಪೋವನ ತರಬೇತಿ ಸಂಸ್ಥೆಯಲ್ಲಿ ವಸತಿ ಸಹಿತ ಮೂರು ದಿನಗಳ ರಾಜ್ಯಮಟ್ಟದ “ ನಾಟಕ ಸಾಹಿತ್ಯ ಸಂವೇದನಾ ಶಿಬಿರ ‘’ ವನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ.
• ರಾಜ್ಯದ ಯಾವುದೇ ಜಿಲ್ಲೆಗೆ ಸೇರಿರುವ  ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ  ಅಭ್ಯರ್ಥಿಗಳು ಅರ್ಜಿ ಹಾಕಬಹುದು.
• 20 ರಿಂದ 40ರ ವಯೋಮಿತಿಯಲ್ಲಿರುವವರು ಮಾತ್ರ ಅರ್ಜಿ ಹಾಕಬೇಕು.
• ಆಸಕ್ತ ಅಭ್ಯರ್ಥಿಗಳು ರಂಗಸಾಹಿತ್ಯ, ರಂಗಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ವಿಶ್ವಾಸಾರ್ಹ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
• ವಯಸ್ಸಿಗೆ ಸಂಬಂಧಿಸಿದಂತೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ ದೃಢೀಕೃತ ಪಟ್ಟಿಯನ್ನು ಲಗತ್ತಿಸಬೇಕು.
• ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಮೂರು ದಿನಗಳು ಶಿಬಿರದಲ್ಲೇ ವಾಸ್ತವ್ಯ ಮಾಡಬೇಕು.
• ಅರ್ಜಿಯನ್ನೊಳಗೊಂಡ ಲಕೋಟೆಯ ಮೇಲ್ಭಾಗದಲ್ಲಿ ಕಡ್ಡಾಯವಾಗಿ “ ನಾಟಕ ಸಾಹಿತ್ಯ ಸಂವೇದನಾ ಶಿಬಿರ” ಕ್ಕೆ ಅರ್ಜಿ ಎಂದು ನಮೂದಿಸಿರಬೇಕು.
• ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿಬಿರದ ಸ್ಥಳಕ್ಕೆ ಬಂದುಹೋಗಲು ರಾಜಹಂಸ ಬಸ್ ದರವನ್ನು ನೀಡಲಾಗುವುದು. ಹಾಗೂ ಮೂರು ದಿನಗಳು ಊಟ, ಉಪಹಾರದ ವ್ಯವಸ್ಥೆಯನ್ನು ಮಾಡಲಾಗುವುದು.
• ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಅಕಾಡೆಮಿಯ ವೆಬ್ ಸೈಟ್ ನಿಂದ ಪಡೆದುಕೊಳ್ಳಬಹುದು.
• ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಜುಲೈ ಮೊದಲ ವಾರದಲ್ಲಿ ಅಕಾಡೆಮಿಯ ವೆಬ್ ಸೈಟ್
http://karnatakasahithyaacademy.org ನಲ್ಲಿ ಪ್ರಕಟಿಸಲಾಗುವುದು.
• ಆಯ್ಕೆಯಲ್ಲಿ ಅಕಾಡೆಮಿಯ ತೀರ್ಮಾನವೇ ಅಂತಿಮ.
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-6-2015
• ಅರ್ಜಿಯನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಪ್ರೊ. ಎಚ್.ಎಸ್. ಉಮೇಶ್
ನಾಟಕ ಸಾಹಿತ್ಯ ಸಂವೇದನಾ ಶಿಬಿರದ ನಿರ್ದೇಶಕರು
ಕೇರಾಫ್/ ಕರ್ನಾಟಕ ಸಾಹಿತ್ಯ ಅಕಾಡೆಮಿ
ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
(080-22211730/ 22106460)
 

‍ಲೇಖಕರು G

June 8, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Gopaala Wajapeyi

    1983ರಲ್ಲಿ ಡಾ. ಚಂದ್ರಶೇಖರ ಕಂಬಾರ ಅವರು ಅಧ್ಯಕ್ಷರಾಗಿದ್ದಾಗ, ಕರ್ನಾಟಕ ನಾಟಕ ಅಕಾಡೆಮಿ ದಾವಣಗೆರೆ ಸಮೀಪದ ಕೊಂಡಜ್ಜಿಯಲ್ಲಿ ಒಂದು ನಾಟಕ ರಚನಾ ಶಿಬಿರವನ್ನು ಏರ್ಪಡಿಸಿತ್ತು. ನಿರ್ದೇಶಕ, ನಾಟಕಕಾರ ಪ್ರಸನ್ನ ಆ ಶಿಬಿರದ ಸಾರಥ್ಯ ವಹಿಸಿಕೊಂಡಿದ್ದರು. ಸುಮಾರು ಹತ್ತು ದಿನಗಳ ಆ ಶಿಬಿರಕ್ಕೆ ಅನ್ಯ ಭಾಷೆಗಳ ನಾಟಕಕಾರರನ್ನು ಒಳಗೊಂಡಂತೆ ಎಲ್ಲ ರಂಗತಜ್ಞರನ್ನು ಆಹ್ವಾನಿಸಲಾಗಿತ್ತು. ನಾಟ್ಕ ರಚನಾ ತಂತ್ರಗಳ ಕುರಿತ ವ್ಯಾಪಕವಾದ ಚರ್ಚೆಗಳು, ಪ್ರಾತ್ಯಕ್ಷಿಕೆಗಳು ನಡೆಯುತ್ತಿದ್ದವು. ನಾನು ಶಿಬಿರಾರ್ಥಿಯಾಗಿ ಅಲ್ಲಿ ಭಾಗವಹಿಸಿ ಕಲಿತದ್ದು ಬಹಳ. ತುಂಬಾ ಉಪಯುಕ್ತವಾದ ಅಂಥ ಶಿಬಿರ ಮತ್ತೊಮ್ಮೆ ನಡೆಯಬೇಕು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: