ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಚಿಕೆಯಿಲ್ಲದ ಮನಸೇ ಸಾಕ್ಷಿ..

ಗಾಯತ್ರಿ ಬಡಿಗೇರ

ನೀರಲ್ಲಿ ಮಿಲನವಾಗಿ
ಹೇಳದಂತೆ ಹೆಸರಾಗಿ ಹೋಗುವ ಬಣ್ಣದ ಬದುಕು
ಎಂದಿಗೂ ರೂಪ ಪಡೆಯಲು ಅಸಾದ್ಯ…

ಹರಿಯುವ ವೇಗವನ್ನು
ಇಳಿಜಾರಿನಿಂದ ತಡೆಯಲಾಗದೆ
ಕೈ ಕೊಟ್ಟು ತಳ್ಳುವದು…

ಬರಿದಾದ ಜೀವ
ಯಾರಿಗೂ ಹೊರೆಯಾಗಬಾರದೆಂದು
ಸಮುದ್ರ ಸೇರಿ
ಉಪಯೋಗಕ್ಕೆ ಬಾರದ ಉಪ್ಪಿನ ನೊರೆಯಾಗುವದು…

ಸಿಕ್ಕರೆ ಸುಳಿಯಾಗಿ
ಭಯದ ವೇಷ ಹಾಕಿ
ಎಲ್ಲರನ್ನು ದೂರ ಮಾಡಿ ಅನಾಥವಾಗುವದು
fill-in2

ನನ್ನದೊಂದು ಅನ್ನೋದು ಏನಿದೆ..?

ಇನ್ನು ಹುಡುಕುತ್ತಿದ್ದೇನೆ..

ಹುಡುಕುವ ಪ್ರಯತ್ನದಲ್ಲಿ ನಿಜವಾಗಲೂ ನಾ
ಗೆಲ್ಲುತ್ತಿಲ್ಲ

ಸಿಗದು ಒಂದಿಷ್ಟು ನೆಮ್ಮದಿ, ನರಕ ಯಾತನೆ
ತಪ್ಪದು

ಇರೋದು ಒಂದೇ
ಪರರ ಸುಖಕ್ಕಾಗಿ ಒಂದು ಕೃತಕ ನಗೆ…
fill-in2

ಒಮ್ಮೆ ಮರೆಯಾಗುವ ಬದುಕು
ಕಣ್ಣಮುಂದೆ ಎಷ್ಟು ಸೋಗು ಹಾಕುವುದು…
ಒಂದಿಷ್ಟು
ನಿರ್ಭಾವುಕವಾಗಿ ಕುಂತಾಗ
ಅಳು-ನಗುವಿನ ಅರ್ಥಗಳು
ನಮಗೇಕೆ ಎಂದೂ ತಿಳಿಯದು…?
ಎಲ್ಲವು ಅನುಭವಕ್ಕೆ ಬರುವ ಹೊತ್ತಿಗೆ
ರಂಗಮಂದಿರದ
ರಂಗದಾಟವು ಹಳಸಿದ
ಪದಾರ್ಥವಾಗುವದು..
fill-in2

ನಾ ಕಂಡ ಕನಸಿಗೆ
ನೀ ಕೊಟ್ಟ ಭರವಸೆಯೇ ಸಾಕ್ಷಿ
ಹೇಳದೆ ಮರೆಯಾದ ನಿನ್ನ ದ್ರೋಹಕ್ಕೆ
ನನ್ನ ನಂಬಿಕೆ ಸಾಕ್ಷಿ
ತೊರೆಯುವ ಮುನ್ನ ಸೇರುವೆ ಎನ್ನ
ಹುಚ್ಚುಕಲ್ಪನೆಯ ನೆನಪುಗಳೇ ಸಾಕ್ಷಿ
ಮರಿಚೀಕೆಯಾದ ಪ್ರೀತಿಗೆ ಮತ್ತೇ ಸೇರುವ ತವಕಕ್ಕೆ
ನಾಚಿಕೆಯಿಲ್ಲದ ಮನಸೇ ಸಾಕ್ಷಿ…

‍ಲೇಖಕರು Admin

22 December, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading