ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನವಿಲಂತೆ ಗರಿ ಬಿಚ್ಚಿ..

geetha hegde kalmane

ಗೀತಾ ಹೆಗ್ಡೆ 

ಬಡಪಾಯಿ ನಾನು
ಯಾವುದೋ ಮೂಲೆಯಲ್ಲಿ
ಕಣ್ಣ ಹನಿ ತೊಟ್ಟಿಕ್ಕುತ್ತ
ಬಿಕ್ಕಳಿಕೆಯ ಕೂಗು
ನನಗೊಂದೆ ಕೇಳಿಸುವಂತೆ
ಬಿಕ್ಕಿ ಬಿಕ್ಕಿ ಅಳುತ್ತ
ಕಳೆದ ದಿನ ರಾತ್ರಿಗಳು ಅದೆಷ್ಟೋ!

peacock on cupಯಾರೋ ಕೇಳಿದರು ನನಗೆ
ಮುಂದೇನು ಬದುಕಿನ ರೀತಿ
ನಾ ನಿಂತ ನೀರಾಗಿ ಇರುವೆನೆಂಬ ಆತಂಕವೊ
ಅಥವಾ ವ್ಯಂಗದ ಚಿತ್ತದ ಭಿತ್ತಿಯೊ
ಗೊತ್ತೇ ಆಗಲಿಲ್ಲ
ಆದರೆ
ದಿನಕ್ಕೊಮ್ಮೆಯಾದರೂ ನೆನಪು
ಕದ ತಟ್ಟುತ್ತಲೇ ಇತ್ತು
ವರುಷ ಐವತ್ತಾದರೂ.

ಬರೆದೆ ಬರೆದೆ
ಹರಿದು ಬಿಸಾಕಿದೆ
ನೆಲೆಯಿರಲಿಲ್ಲ ; ಧೈರ್ಯ ಮೊದಲೇ ಇಲ್ಲ
ಅದಾವ ಕಸದ ಗುಂಡಿ ಸೇರಿ
ಅಳುತ್ತಿವೆಯೊ ನನ್ನ ಕವಿತೆಗಳು
ಬನ್ನಿ ಬನ್ನಿ ಎಂದು ಅದೆಷ್ಟು
ಜೋರಾಗಿ ಕರೆದರೂ ಬರಲೊಲ್ಲವು
ಗೀಚಿದ ಅದ್ಭುತ ಆ ಹಳೆಯ ಕವಿತೆಗಳು
ನೆನಪಿಗೂ ಬಾರವು ಏಕೊ ಗೊತ್ತಿಲ್ಲ
ಈಗೆಷ್ಟೇ ಬರೆದರೂ ತೃಪ್ತಿ ಇಲ್ಲ
“ಓಲ್ಡ ಈಸ್ ಗೋಲ್ಡ್”
ಇದಂತೂ ನನ್ನ ಪಾಲಿಗೆ ಖರೇ ಮಾತು!

ನವಿಲಂತೆ ಗರಿ ಬಿಚ್ಚಿ ಹಾರಾಡುವ ಬರಹಗಳೇ
ಏಕೀ ಕುಣಿತ?
ತಾಣದ ಹುಲ್ಲುಗಾವಲಿನಲ್ಲಿ
ಕಾಲಿಗೆ ಗೆಜ್ಜೆ ಕಟ್ಟಿ ನೆಲೆ ಸಿಕ್ಕ ಅಹಂಕಾರವೆ!
ಕುಣಿರಿ ಕುಣಿರಿ ನೀವು ಅದೃಷ್ಟವಂತರು
ಅದರೆ ಕವಿ ಮನ ಹೇಳಿದಂತೆ
“ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ”
ನನ್ನ ಮನಸ್ಸು ಆ ಹಳೆ ಪಳಯುಳಿಕೆಯಲ್ಲೆ
ನೆನಪಿರಲಿ!

‍ಲೇಖಕರು Admin

18 September, 2016

0 Comments

Trackbacks/Pingbacks

  1. ನವಿಲಂತೆ ಗರಿ ಬಿಚ್ಚಿ.. | | Sandhyadeepa…. - […] http://avadhimag.online/2016/09/18/%e0%b2%a8%e0%b2%b5%e0%b2%bf%e0%b2%b2%e0%b2%82%e0%b2%a4%e0%b3%86-%e0%… […]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading