ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಳಿನ ಡಿ ಹೊಸ ಕವಿತೆ- ಹಿಡಿದ ಕೈ ಬಿಡದಂತಿರಬೇಕು…

ನಳಿನ ಡಿ

ಬಳೆ ಬೇಕು,
ಬಳಸ ಬೇಕು,
ಬಂಗಾರ ಬೇಕು
ಬಂಗಾರದಂತಿರಬೇಕು
ಮುತ್ತಿನೋಲೆ ಬೇಕು
ಮುತ್ತಿಡಬೇಕು
ಮನೆ ಬೇಕು,
ಮನೆಯಲ್ಲೇ ಮನಸ್ಸಿರಬೇಕು,
ಅರಿಸಿನ ಕುಂಕುಮ ಬೇಕು,
ಆಲಿಂಗಿಸಲು ಹಾತೊರೆಯಬೇಕು,
ಬೆರಳಿಗೊಂದೊಂದು ಉಂಗುರದೊಡವೆ ಬೇಕು,
ಬೆರಳಿನ ಉಗುರಿನಂತೆ ಒಂದಾಗಿರಬೇಕು,
ಜುಮುಕಿ ಬೇಕು,

ಜೀವನ ಜೋಕಾಲಿಯಲಿ ಸದಾ ಕುಡಿಯುತಿರಬೇಕು,
ಕಡಗವೊಂದಿರಬೇಕು
ಹಿಡಿದ ಕೈ ಬಿಡದಂತಿರಬೇಕು,
ಡಾಬು ಇರಲೇಬೇಕು,
ಢಾಂಬಿಕತೆ ಬಿಟ್ಟು ಸತಿಗೆ ಅರ್ಧನಾರೀಶ್ವರನಾಗಿರಬೇಕು,
ಕಾಲ್ಗೆಜ್ಜೆ ಬೇಕು,
ಸದ್ದು ಆಲಿಸಿ ಬಳಿಸಾರಬೇಕು
ಉದ್ದ ಜಡೆಗೆ ಬೆಳ್ಳಿ ಕುಚ್ಚು ಇರಬೇಕು,
ನಮ್ಮ ನೋಡುವವರ
ದೃಷ್ಟಿಯೆಲ್ಲಾ ಅದರಲ್ಲೇ ದೂರವಾಗಬೇಕು

‍ಲೇಖಕರು Admin

18 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading