ನರೇಶ ಹೊಸ ಕವಿತೆ – ತಲೆದಂಡ..

ನರೇಶ

ಹಸಿವಂಗೆ ಅನ್ನದಗಳನದಿಕ್ಕೆ, ದಾಸೋಹವದು ಶ್ರೇಷ್ಠಕಣ.

ಇರುವಿನರಿವಿರದೆ, ಅಂಡಲೆವ ಹಸುಳೆಕಂದಮ್ಮಗಳಿಗುಣಿಸೆ ವಿದ್ಯೆಯದ,
ಬಲುಶ್ರೇಷ್ಠ ದಾನವದು ಜ್ನಾನದಾಸೋಹ.

ಅಗಿದನ್ನ ಜಗಿಜಗಿದು ಜೀರ್ಣಾಂಗ ನುಸುಳಿದೊಡೆ ಮುಂಜಾನೆ
ಮಲವದುವೆಕಣ ರಾಜನಾಥ.

ಬೋಧಿಯದು ಬೇಕಾಯ್ತೆ
ಬಸವಳಿದ ಬದುಕಿಂಗೆ.

ಇಕ್ಕು,
ಮೊಗೆದಿಕ್ಕು,
ಬಿರಿದದಿಕ್ಕು ಅದ,
ಉಳಿವುದಾ ಮಸಣಾಂತರಕು ಮಿಗಿಲು..

ಜಂಗಮವು ಅಂಗವದು,
ಹಂಗಿಲ್ಲದರಮನೆಯ ಅಗಸಿರಂಗವೆರಂಗು, ಬಲುಸೊಗಸು ಕಾಣ, ರಾಜನಾಥ.

ಉದ್ಧಂಡ ದೋರ್ಧಂಡ ಬ್ರಹ್ಮಾಂಡ ದಂಡವದು, ಬಲ್ಲಿದರ ತಲೆದಂಡ ಅಲ್ಲಲ್ಲವೇನಾ ಸಾಮಿನಾಥ…

‍ಲೇಖಕರು Admin

January 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ನರೇಶ ಮಯ್ಯ

    ‘ಥ್ಯಾಂಕ್ಸ್,ಎಂದರೆ ಅಷ್ಟೇಸಾಕೆ….’ ಅವಧಿ.

    ರಂಗಭೂಮಿ, ಟೆಲಿವಿಷನ್, ಸಿನೆಮಾ, ಅಭಿನಯ, ಚೂರ್ಪಾರು ಬರವಣಿಗೆ ಅನ್ನಬಹುದಾದ ಜಾಡಿನಲ್ಲಿ ಬೆರೆತು ಹೋಗಿ, ವರ್ಷಗಳೇ ಸಂದಿವೆ.‌

    ಈ ಅಷ್ಟೂ ವರ್ಷಗಳಲ್ಲಿ ಆದಷ್ಟೂ ಎಚ್ಚರವನ್ನ, ಜವಾಬ್ದಾರಿಯನ್ನ ಈ ‘ಚೂರ್ಪಾರೇ’ ಕೃತಿಗಳಲ್ಲಿ ಇನ್ನಿಲ್ಲದಂತೆ ಜತನಮಾಡಿಕೊಳ್ಳಲು ಸದಾ ಹೆಣಗುತ್ತಲೇ ‘ಇರುವಂಥ’ ನನ್ನಂತ ಅದೆಷ್ಟೋ ಜೀವಗಳಿಗೆ ಯಾವತ್ತೂ ಉಸಿರಾಗಿ, ಬೆಚ್ಚಗಿಟ್ಟಿರುವ ನಿಮ್ಮಂಥವರ ಜೀವ ಎಂದೂ ತಂಪಾಗಿರಲಿ-ಸೊಂಪಾಗಿರಲಿ…

    ನಮ್ಮ ತಲೆಮಾರಿನ ಮಾಸ್ಟರ್ ಗಳು ಒಬ್ಬೊಬ್ಬರಾಗಿ ತಂತಮ್ಮ ಕಾಯಕವನ್ನ ನಿಶ್ಠೆಯಿಂದ ಮುಗಿಸಿ, ಉಳಿದದ್ದನ್ನು ನಮಗೆ ವಹಿಸಿಕೊಟ್ಟು ಹೋಗಿದ್ದಾರೇನೋ ಎಂದು ಭಾಸವಾಗುತ್ತಿದೆ.

    ಅವೆಲ್ಲವನ್ನ ಕನಿಷ್ಠ ನಮ್ಮ ಮನೆ-ಮಕ್ಕಳಿಗಾಗಿಯಾದರೂ ಹಂಚುವ-ಉಣ್ಣುನ ಕೆಲಸ ತೋರಿಹೋಗಿದ್ದಾರೆ; ಮಹಾತ್ಮರವರು.

    ಈ ಜೊತೆ, ಈ ನಡೆ ಎಂದೂ ಕಾಪಿಟ್ಟುಕೊಳ್ಳುವ ಸರ್….

    ಈ ನನ್ನ ಅಕ್ಷರಗಳನ್ನೇನಾದರೂ ಒಂದು ‘ಕವಿತೆ’ ಎಂದು ಯಾರಾದರೂ ಅಂದುಕೊಂಡದ್ದೇ ಆದಲ್ಲಿ ಆ ಗೌರವ, ಪ್ರಥಮದಲ್ಲಿ ಅದು ನನ್ನ ಅಪ್ಪನಿಗೆ, ಸುಬ್ಬಣ್ಣ, ಕೀರಂ ಮತ್ತೆ ಚಂಪಾಗೇ…..

    ‘ಪ್ರೀತಿಸದಿದ್ದರೆ ಏನನ್ನೂ ಮಾಡಲಾರೆ, ದ್ವೇಷವನ್ನು ಕೂಡಾ….’

    ನರೇಶ ಮಯ್ಯ
    9663850392

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: