ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನಯಾಗರ ನೋಡಿ ನಯಾಗರ’ – ಡಾ ಶಿವಾನಂದ ಕುಬಸದ್ ಕವನ

ನಯಾಗರ

ಡಾ ಶಿವಾನಂದ ಕುಬಸದ್

ಧೊಪ್ಪೆಂದು ಬಿದ್ದು ಗಿರಕೀಯ ಹೊಡದು
ಮ್ಯಾಲಕ್ಕ ಹಾರಿ ತುಂತುರಾ
ಮುಗಲ ಹರದು ಧುಮ್ಮಿಕ್ಕಿ ನುಗ್ಗಿ
ಬರತsದ ನೋಡ ನಯಾಗರಾ
ನೀಲೀಯ ನೀರ ಬೀಳೂವ ಸಡಗರ
ಕಣ್ತುಂಬ ತುಂಬಿ ಜೋರ
ಗಂಗೆ ಹಮ್ಮಿಲೆ ಇಳದ್ಹಾಂಗ ಇತ್ತ
ಶಿವನ ಶಿರದ ಮ್ಯಾಲ
ನಾವಿನೊಳಗ ಸಾಗಿ ನಾವಲ್ಲಿ
ನಿಂತಾಗ ಹೊಳಿ ಬೀಳೂವಲ್ಲಿ
ಮೈಯೆಲ್ಲ ತೊಯ್ವ ಸುಖವೆಂಥದಿತ್ತ
ಮರಿಲಾರದ್ಹಂಗ ತುಂಬಿ ಚಿತ್ತ
ಸಾಗರನ ಎಡವಿ ಬಿದ್ದಂಥ ನೋಟ
ಎಲ್ಲಿತ್ತ ಇಷ್ಟ ನೀರ
ಜನಕೆಲ್ಲ ಬೆಳಕ ಮನಕೆಲ್ಲ ಸೆಳಕ
ನೀಡಾಕ ಹುಟ್ಟಿದ್ಹಂಗ
ರಾತ್ರೀಯ ನೋಟ ಮಾಡಿತ್ತ ಮಾಟ
ಸ್ವರ್ಗsದ ಝಲಕ ಅಲ್ಲಿ ನೋಡ
ಮತ್ತೊಮ್ಮಿ ನೋಡಿ ಖುಶಿಪಡುವ ಮನಸ
ನೀವಿದ್ರ ಜೊತಿಗಿ ಸೊಗಸ
 
 

‍ಲೇಖಕರು G

5 June, 2015

9 Comments

  1. Dr.Ratna Kulkarni

    ನಯಾ ಗರ!
    ಬಹಳ ಚೆನ್ನಾಗಿದೆ.

  2. Gcravi

    Bahala sogasaagide nimma kavana

  3. kumbar Veerabhadrappa

    ಡಾಕ್ಟರ್ ಸಾಬ್ ನಯಾಗಾರ ಕುರಿತ ನಿಮ್ಮ ಕವಿತೆ ಚೆನ್ನಾಗಿದೆ, ಅದರ ಸಾನ್ನಿಧ್ಯ ಅವಿಸ್ಮರಣೀಯ ಅನುಭವ,ಕೆಲವು ವರ್ಷಗಳು ಉರುಳಿದ್ದರೂ ಅದು ನನ್ನೆದೆಯಲ್ಲಿ ಧುಮ್ಮಿಕ್ಕುತ್ತಲೇ ಇದೆ, ಅದೊಂದು ಅಕ್ಷರಗಳಿಗೆ ಎಟುಕದ ರೌದ್ರರಮಣೀಯ ಜಲಧಾರೆ, ಅಲ್ಲಿನ ಪರಿಸರದ ಶುಚಿತ್ವ ಜಗತ್ತಿಗೆ ಮಾದರಿ,
    ನಿಮ್ಮ ಪ್ರವಾಸದ ಅನುಭವಗಳನ್ನು ಕನ್ನಡ ವಾಚಕರಿಗೆ ಉಣಬಡಿಸುತ್ತಿರುವ ನಿಮಗೆ ಧನ್ಯವಾದಗಳು,
    ನಿಮ್ಮಿಂದ ಇನ್ನೊಂದು ಪ್ರವಾಸ ಕಥನ ಪ್ರಕಟಗೊಳ್ಳಲು
    ಕುಂವೀ

  4. noorullathyamagondlu

    ಚೆನ್ನಾಗಿದೆ ಸಾಬ್ ರವರೆ.

  5. kusumabaale

    ಚೆಂದವಿದೆ ಸರ್.ಕವಿಮನಸು ಎಲ್ಲಿ ಹೋದರೂ ಹಿಂಬಾಲಿಸುತ್ತದೆ ನೋಡಿ.:-)

  6. ಲಲಿತಾ ಸಿದ್ಧಬಸವಯ್ಯ

    ಚೆನ್ನಾಗಿದೆ ಡಾಕ್ಟ್ರೆ, ಇಂಥ ಸೊಗಡು ಭಾಷೆಯಲ್ಲಿ ಅಪರೂಪವಾಗ್ತಾ ಇದೆ. ಎಲ್ಲರೂ ಇಸ್ತ್ರಿ ಹಾಕೇ ಬಳಸ್ತಾರೆ.

  7. Upendra

    ಕೊನೀ ಸಾಲಿನ್ಯಾಗಾ ಛಲೋ ಐಡ್ಯಾ ಕೊಟ್ಟೀರಿ ಸರಾ … ಹೋಗೂಣು ಮುಂದಿನ ಸಲ …
    ಜೊತೆಯಾಗಿ… ಸೊಗಸಾಗಿ..
    ನಾಯಾಗರ ನೋಡುತ್ತಾ ಗರ ಬಡಿದು ನಿಂತ ಅನುಭವ…
    ಚೆನ್ನಾಗಿದೆ…

  8. mmshaik

    nice poem..sir

  9. ಭೀಮಪ್ಪ ಹುಣಸೀಕಟ್ಟಿ

    ನಿಮ್ಮ ಚಂದದ ಜವಾರೀ ಹಾಡು ಓದಿ
    ಅಂದ್ಕೊಂಡೆ….
    ವಾಹ್ !!
    ನಯಾಗರಾ ..
    ತಪ್ಪಿಸಿಕೊಂಡೆ
    ನಾ ಯಾಕರಾ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading