ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ ಅಮ್ಮಾಗ ಏನೂ ಗೊತ್ತಿಲ್ಲ

ನನ್ ಅಮ್ಮಾಗ ಏನೂ ಗೊತ್ತಿಲ್ಲ

valli quadras

ಕೊಂಕಣಿ ಮೂಲ ಮತ್ತು ಅನುವಾದ: ವಲ್ಲಿ ಕ್ವಾಡ್ರಸ್

ನನ್ ಅಪ್ಪಾ ಲೆಕ್ಕದ ಪಂಡಿತ
ಬೆಳಿಗ್ಗೆ ಎಷ್ಟು ಮಾತ್ರೆ ತಗೋಬೇಕು
ದಿವ್ಸಾಗೆ ಎಷ್ಟು ರಾತ್ರಿಗೆ ಎಷ್ಟು ಅನ್ನೋದು
ನನ್ ಅಮ್ಮಾಗೆ ಮಾತ್ರ ಗೊತ್ತು
ನನ್ ಅಪ್ಪಾ ಟ್ರಿಗ್ನೋಮೆಟ್ರಿ
ಆಲ್‌ಜಿಬ್ರಾ ಕ್ಯಾಲ್ಕುಲಸ್ ತಜ್ನ
ನನ್ ಅಮ್ಮಾಗ ಏನೂ ಗೊತ್ತಿಲ್ಲ

momನನ್ ಡಾಕ್ಟರ್ ಅಣ್ಣ ರಾತ್ರಿಗೆ ಫೋನ್ ಮಾಡೋದು
ಅಮೇರಿಕಾದ ದಿನ ನಮ್ಗೆ ರಾತ್ರಿ
ನಿನ್ ತಿಂಡಿ ಆಯ್ತೇನೋ ಅಂತ ಕೇಳ್ದಾಗಾ
ಅಣ್ಣ ನಗುತ್ತಾ ಜವಾಬು ಕೊಟ್ಟಾನು;
’ಅಮ್ಮಾ ಬರ್ಗರ್ ಸೋಸೆಜ್ ತಿಂದಾಯ್ತು’
ಅಮ್ಮಾ ಪುನಃ ಕೇಳ್ದಾಳು ’ತಿಂಡಿ ಆಗಿಲ್ವಾ?’
ನನ್ ಅಮ್ಮಾಗ ಏನೂ ಗೊತ್ತಿಲ್ಲ

ನನ್ ಅಕ್ಕಾ ಮುಂಜಾನೆಯಲೇ ಫೋನ್ ಮಾಡ್ತಾಳೆ
ಮಗ್ಳು ಏನೂ ಕಷ್ಟದಲ್ಲಿದ್ದಾಳೋ ಎಂದು
ಅಮ್ಮಾ ಇಡೀ ದಿವ್ಸ ಯೋಚ್ಸಿ ಕುಂತಾಳೆ
ಆಸ್ಟ್ರೇಲಿಯಾದ ಘಡಿಯಾಳ ನಮ್ಕಿಂತಾ ಮುಂದಿದೆ ಎಂದು
ಅಮ್ಮಾಗೆ ಎಷ್ಟೋಬಾರಿ ಕಲಿಸಿದ್ರೂ
ನನ್ ಅಮ್ಮಾಗ ಏನೂ ಗೊತ್ತಿಲ್ಲ

ನನ್ ಡೈವೋರ್ಸ್ ಕೇಸ್ ಕೋರ್ಟಿನಲ್ಲಿ ಐತೆ,
ನಾ ಉಣದೇ ಮಲಗಿದ್ರೆ;
ಅಮ್ಮ ರಾತ್ರಿಯಿಡೀ ಕುಂತು ದೇವ್ರಲ್ಲಿ ಕೇಳ್ತಾಳೆ.
ನನ್ ಅಮ್ಮಾಗೆ ಒಂದೇ ಚಿಂತೆ;
ನನ್ ಗಂಡ ನನತ್ರ ರಾಜಿಯಾಗ್ಬೇಕು.
ಈ ಡೈವೋರ್ಸು ಅಲ್ಯುಮ್ನಿ ಎಂಬುದು –
ನಿಜ್ವಾಗ್ಲೂ ಅನ್ತೇನೆ; ನನ್ ಅಮ್ಮಾಗ ಏನೂ ಗೊತ್ತಿಲ್ಲ

ನಾವ್ಯಾರಾದ್ರೂ ಹುಶ್ಯಾರು ಇಲ್ಲಾದ್ರೆ
ಅಮ್ಮಾ ರಾತ್ರಿಯಿಡಿ ಮಲ್ಗದೆ ಸೇವೆ ಮಾಡ್ತಾಳೆ.
ಮೈಮೇಲೆ ಒಸಿ ಸಣ್ಣ ಗಾಯವಾದ್ರೂ,
ಊರಿನೆಲ್ಲಾ ಸೊಪ್ಪರಿದು ಲೇಪವಿಟ್ಟಾಳು
ಸ್ವತಃ ಹಸಿದಿದ್ರೂ ನಮ್ಗೆಲ್ಲರ್ಗೂ ಬಡಿಸ್ತಾಳೆ
ಎಂದೂ ಓವರ್‌ಟೈಮ್ ವ ಸೀರೆ ಕೇಳೋಲ್ಲ
ನನ್ ಅಮ್ಮಾಗ ಏನೂ ಗೊತ್ತಿಲ್ಲ ನಿಜ್ವಾಗ್ಲೂ
ನನ್ ಅಮ್ಮಾಗ ಏನೂ ಗೊತ್ತಿಲ್ಲ

 

‍ಲೇಖಕರು Admin

25 March, 2016

2 Comments

  1. Johns unticoppa

    ಅಮ್ಮನ ಮುಗ್ಧತೆಯೇ ಹಾಗೆ ದೈವತ್ವ ವನ್ನು ಮೀರುವಂತಾದ್ದು…, ಅಭಿನಂದನೆಗಳು ಸರ್,.

  2. ಜೆ.ವಿ.ಕಾರ್ಲೊ

    ಅಮ್ಮನೂ ಗಣಿತ ತಜ್ಞೆಯಾಗಿದ್ದಿದ್ದರೆ ಜಗತ್ತೆಲ್ಲಾ ಲೆಕ್ಕಾಚಾರದಲ್ಲೇ ಮುಳುಗಿರುತ್ತಿತ್ತು ಅಲ್ಲವೇ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading