ನನ್ನ ಬೆವರ ಹನಿಗಳು ಸತ್ತಿವೆ, ನೀವು ಬೆಳಗುತ್ತಿದ್ದೀರಿ..
ನಾ ಬಸಿದ ಬೆವರ ಹನಿಗಳಿಂದ
ಅರಳಿದವು ಹೂವುಗಳು
ಕ್ರಾಂತಿ ಸತ್ತಿದೆ ಅಲ್ಲಿ
ಹಸಿವು ನೀಗಿಸದ ಕಾರಣಕ್ಕೆ,
ಹಣೆ ಸೀಳಿ, ಬಸಿದ ಎದೆಯ ದಾಟಿವೆ
ದುಃಖದಿಂದ
ಮಂಡಿಯೂರಿದ ನನ್ನ ಜನಗಳ ಪಾದ ಸೋಕಿವೆ
ಧರೆಗೆ ಇಳಿಯುವ ಮೊದಲೆ
ಸತ್ತು ಹೋಗಿದೆ, ವಾಸನೆಯೂ ಇಲ್ಲದೆ
ಹೌದು
ಬೆವರ ಹನಿಗಳೆಂದರೆ ನನ್ನವರ ಇತಿಹಾಸ `
ಹಸಿದ ಹೊಟ್ಟೆಗಳು ತುಂಬುತ್ತವೆ ,ಮೊಳಕೆಗಳು ಒಡೆಯುತ್ತವೆ
ಹೂವುಗಳು ಅರಳುತ್ತವೆ , ಕನಸುಗಳ ಕಟ್ಟುತ್ತವೆ
ಬೆವರ ಸೋಕಿಗೆ ಭುವಿ ತಂಪಾಗುತ್ತಾಳೆ
ಕಾರಣ ಶಕ್ತಿಯೇ ಅಂಥದ್ದು…
ಹಸಿವಿಗೆ ಹುಟ್ಟಿದ ಹನಿಗಳವು…

ಎದೆ ಸೀಳಿ ಹರಿದವು …
ಉಮ್ಮಳಿಸಿದ ದುಃಖ ತಡೆಯದ ಕಾರಣಕ್ಕೆ
ಕನಸುಗಳು ಒಡೆದ ಕಾರಣಕ್ಕೆ
ನಿಮ್ಮದೇ ದೌರ್ಜನ್ಯ, ಯಾತನೆಗೆ ಹುಟ್ಟಿದ್ದು
ಅದನ್ನು ತಾಳ್ಮೆ ಎಂದಿರಿ,
ಕ್ರೌರ್ಯ ಎನ್ನಲು ನನಗೇ ಮನಸ್ಸು ಬರುತ್ತಿಲ್ಲ
ಕಾರಣ ನೀವು ಬಸಿದ ಗಂಜಿಯ ಋಣ
ತಾಳ್ಮೆಗೆ ಕಣ್ಣೀರು ಹಾಕಿದೆವು
ನೀವು ಬೆವರೆಂದುಕೊಂಡಿರಿ..!
ಹೌದು ಬೆವರ ಹನಿಗಳು ಅಷ್ಟೆ….
ಬೇಕಿದ್ದರೆ ಅವುಗಳನ್ನು ಮಾತನಾಡಿಸಿ ನೋಡಿ…!
ನನ್ನವರ ಇತಿಹಾಸ ಇತಿಹಾಸ ಹೇಳುತ್ತವೆ
ನನ್ನ ಬೆವರು ಹನಿಗಳು ಧರೆಗಿಳಿದಿದೆ… ನೀವು ಬೆಳಗುತ್ತಿದ್ದೀರಿ…
ಮಾತನಾಡುತ್ತಿಲ್ಲ
ನನ್ನ ಬೆವರ ಹನಿಗಳು ಸತ್ತಿವೆ.
ಕಣ್ಣೀರು ಬೆವರಾಗಿ ಹರಿದಿದೆ….






rakshasha kuladavarige idella arth agalla nagaraj sir.
nice..uttam kavite..
chennagide kavite
Tubmba chennagide Sir
chennaagide…