ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ನೇತ್ರಗಳು ಬೇಬಿಮಾ

-ರತ್ನರಾಯಮಲ್ಲ

ಗಜಲ್*

ನಿನ್ನ ಉಸಿರಿನ ಕಂಪನಕೆ ಕಾತರಿಸಿವೆ ನನ್ನ ಬಾಹುಗಳು ಬೇಬಿಮಾ
ನಿನ್ನ ಕಣ್ಣಂಚಿನ ಬೆಳಕಿಗೆ ಹಂಬಲಿಸಿವೆ ನನ್ನ ನೇತ್ರಗಳು ಬೇಬಿಮಾ

ಮಧುವಿನ ಹನಿಗಳೆಲ್ಲ ಸೋತಿವೆ ನಿನ್ನ ನಯನಗಳ ನಶೆಯೆದುರು
ನಿನ್ನ ಮೋಹಕ ಮಾತುಗಳು ಬಯಸಿವೆ ನನ್ನ ಕಿವಿಗಳು ಬೇಬಿಮಾ

ಬಿಲ್ಲಂತೆ ಬಾಗಿದ ನಿನ್ನ ಅಧರಗಳ ಅಂಚಲಿ ನನ್ನೆದೆಯು ಕರಗುತಿದೆ
ಮುತ್ತಿನ ಹೊಲಿಗೆಗಾಗಿ ಹದಗೊಂಡಿವೆ ನನ್ನ ತುಟಿಗಳು ಬೇಬಿಮಾ

ಮೈಮನದ ತುಂಬೆಲ್ಲ ನಿನ್ನ ನೆನಪುಗಳು ಮೌನವಾಗಿ ಮಿಡಿಯುತಿವೆ
ಮತ್ತಿನ ರಂಗೋಲಿ ಹಾಕಲು ಕಾಯುತಿವೆ ನನ್ನ ಕರಗಳು ಬೇಬಿಮಾ

ಮಲ್ಲಿಯ ಮನದಂಗಳದಿ ಅರಳಿದ ಮಲ್ಲಿಗೆ ಸುಮದ ಜೀವವೇ ನೀನು
ನಿನ್ನ ಹೆಜ್ಜೆಯ ಸದ್ದು ಅರಸಲು ಚಲಿಸುತಿವೆ ನನ್ನ ಪಾದಗಳು ಬೇಬಿಮಾ

‍ಲೇಖಕರು Admin

10 September, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading