ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನಮ್ಮ..

-ಭೂಮಿಕಾ ಎಸ್ ತಗಡೂರು

ನನ್ನಮ್ಮ ಕೊಂಚ ವಿಭಿನ್ನ
ನನ್ನೆಲ್ಲಾ ಸಾಧನೆಗಳ
ಬಲಗೈ ಅವಳು…
ನನ್ನಲ್ಲಿರುವ ಶಕ್ತಿಯ
ಪ್ರತಿರೂಪ ನನ್ನಮ್ಮ
ರಜಾ ದಿನಗಳಲ್ಲಿ
ಲಾಲಿ ಹಾಡಿ
ಮಲಗಿಸುವವಳಲ್ಲ…

ಮುಂಜಾನೆ ಐದಕ್ಕೆ ಎಬ್ಬಿಸಿ
ಕುಡಿಯಲು ಬಿಸಿ ನೀರಿನ ಪಾನೀಯ ತಯಾರಿಸಿ
ನನ್ನೊಂದಿಗೆ ಜಾಗಿಂಗ್ ಮಾಡೊ ಫಿಟ್ ಮದರ್ ಅವಳು…

ಪ್ರತಿದಿನ ೫ ಕಿ.ಮೀ ಓಡುವಷ್ಟು
ಸ್ಪೂರ್ತಿ ತುಂಬುವಳು ನನ್ನಮ್ಮ
ಅವಳ ಧೈರ್ಯ, ದಿಟ್ಟತನ, ಶಕ್ತಿಯನ್ನೆಲ್ಲಾ
ನನಗೆ ರಕ್ತಗತವಾಗಿ ಕೊಟ್ಟ ಮಾತೃ ಅವಳು…

ಅವಳು ನನ್ನ
ಫಿಟ್ನೆಸ್ ಟೀಚರ್,
ಪ್ರೇರೇಪಕಿ,
ಆಪ್ತ ಸಲಹೆಗಾರ್ತಿ…

ನನ್ನೊಂದಿಗೆ ಪುಸ್ತಕಗಳನ್ನು ಓದುವ ವಿಭಿನ್ನ ಹವ್ಯಾಸಕಿ
ನನ್ನ ಜೊತೆ ಹಾಡಿ-ಕುಣಿದು, ನಕ್ಕುನಗಿಸುವ ಬೆಸ್ಟ್ ಫ್ರೆಂಡ್ ನನ್ನಮ್ಮ…

ಸದಾ ಸ್ಪೂರ್ತಿ ಚಿಲುಮೆ
ಸಿಟ್ಟು ಸೆಡವಿನ ದಿಟ್ಟೆ ಅವಳು
ಸ್ಪರ್ಧೆಗೆ ಅಣಿಗೊಳಿಸುವ
ಬೈದು ಬುದ್ದಿ ಹೇಳುವ,
ರಾಜ್ಯ-ರಾಷ್ಟ್ರ ಮಟ್ಟದ ಸ್ಪರ್ಧೆಗಳಿಗೆ ನನ್ನಪ್ಪನ ಜೊತೆಗೂಡಿ ಸ್ಪೂರ್ತಿಯಲಿ
ಬೆನ್ನು ತಟ್ಟಿ ಹುರಿದುಂಬಿಸುವ
ವಿಭಿನ್ನ ಗುಣ ಶಕ್ತಿ ಅವಳು…

 

‍ಲೇಖಕರು avadhi

12 May, 2020

1 Comment

  1. ನಂದೀಶ್

    ಅಮ್ಮನ ಮುದ್ದಿನ ಮಗಳು ಭೂಮಿಕಾ.. ಕವಿತೆ ಕನ್ನಡಿಯಂತಿದೆ.. ಹೀಗೆ ಮುಂದುವರಿಯಲಿ. ಶುಭಾಶಯಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading