ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನಸಾಯಿತು ತೇಜಸ್ವಿ ಕಂಡ ಕನಸು

ಕನ್ನಡ ಭಾಷೆ, ಉಳಿಕೆಗೆ ಕಂಪ್ಯೂಟರ್ ನಲ್ಲಿ ಕನ್ನಡ ಬಳಕೆ ಹೆಚ್ಚಾಗಬೇಕು ಎಂದು ದನಿ ಎತ್ತಿದ್ದ ದಿವಂಗತ ಪೂರ್ಣ ಚಂದ್ರ ತೇಜಸ್ವಿ ಅವರ ಕನಸು ಇಂದು ನಿಜವಾಗಿದೆ

 
ಅನೇಕ ಕನ್ನಡ ತಂತ್ರಾಂಶಗಳು ಸಾರ್ವಜನಿಕರಿಗೆ ಲಭ್ಯವಾಗಿದೆ.
* 12 ಹೊಸ ಫಾಂಟ್ ಗಳು
* ಹೊಸ ಕೀಲಿ ಮಣೆ ಶೈಲಿ
* ಹಲವಾರು ಪರಿವರ್ತನಾ ಸಾಫ್ಟ್ ವೇರ್
* ಮೊಬೈಲ್ ನಿಂದ ಮೊಬೈಲ್ ಗೆ ಕನ್ನಡದಲ್ಲೇ ಸಂದೇಶ ಕಳಿಸಲು ತಂತ್ರಾಂಶ
* ಪರಿವರ್ತನಾ ತಂತ್ರಾಂಶ ಮೂಲಕ ಈ ಹಿಂದಿನ ಕಡತಗಳನ್ನು(ಶ್ರೀಲಿಪಿ, ನುಡಿ, ಬರಹ..ಇತ್ಯಾದಿ ಲಿಪಿ ಬಳಸಿರುವ ಕಡತ)ಯೂನಿಕೋಡ್ ಗೆ ಸುಲಭವಾಗಿ ಪರಿವರ್ತಿಸಬಹುದಾಗಿದೆ. * ಅಂಧ ವಿದ್ಯಾರ್ಥಿಗಳ ನೆರವಿಗಾಗಿ ಬ್ರೈಲ್ ಲಿಪಿ
* ಕನ್ನಡದ್ದೇ ಕೀ ಬೋರ್ಡ್

ಪೂರ್ಣ ಚಂದ್ರ ತೇಜಸ್ವಿ ಅವರ ಆಶಯದಂತೆ ಈ ಹಿಂದೆ ಹಂಪಿ ವಿಶ್ವವಿದ್ಯಾಲಯಕ್ಕೆ ಕುವೆಂಪು ತಂತ್ರಾಂಶ ಹಾಗೂ ಲಿಪಿಗಳನ್ನು ರೂಪಿಸಿಕೊಟ್ಟಿದ್ದ ಹಾಸನದ ಮಾರುತಿ ಸಾಫ್ಟ್ ವೇರ್ ಇನ್ಫಾರ್ಮೇಷನ್ ಸಿಸ್ಟಮ್ ಸಂಸ್ಥೆಯೇ ಈ ಮೇಲ್ಕಂಡ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಿದೆ.
12 ಫಾಂಟ್ ಗಳಿಗೆ 8 ಮಂದಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು ಹಾಗೂ ಡಿವಿ ಗುಂಡಪ್ಪ, ಕೆಎಸ್ ನರಸಿಂಹ ಸ್ವಾಮಿ ಅವರ ಹೆಸರನ್ನಿಡಲಾಗಿದೆ.
 

‍ಲೇಖಕರು G

23 January, 2014

1 Comment

  1. Ramesh Gururajarao

    How to download this software on to my android phone ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading