ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನಗೆ ನಿನ್ನ ನೋಡುವಾಸೆ..

-ಮಹಾಮನೆ

ತಂಗಾಳಿ ಸಾಲು

ಇಳಿ ಸಂಜೆಯ
ಬೆಳಕಲಿ
ನನಗೆ ನಿನ್ನ ನೋಡುವಾಸೆ
ಚಂದ್ರಮೆ..
ನಿನಗಾಗಿ ಕಾದು
ಕಾದೂ ಕೆಂಪಾಗಿದ್ದಾವೆ
ನನ್ನ ಕಣ್ಣುಗಳು
ಸಂಜೆಯ ಸೂರ್ಯನಂತೆ…
ನಿನ್ನ ನೋಡಲು
ಅನಾದಿ ಕಾಲದಿಂದಲೂ
ಸೂರ್ಯನೂ ಕಾದಿದ್ದಾನೆ..
ಪಡುವಣ ಕಡಲಲಿ
ಅವನ ಪ್ರಾಣ
ಲೀನವಾಗುವ ಮುನ್ನ
ಬಂದು ಬಿಡು…
ನನಗಾಗಿ ಅಲ್ಲದಿದ್ದರೂ
ಸೂರ್ಯನ ಮೇಲಾದರೂ
ಕರುಣೆ ತೋರೆ…
ಅವನ ನೆಪದಲ್ಲಾದರೂ
ನಿನ್ನ ಕಾಣಬಹುದೆಂಬಾಸೆ
ನನ್ನೀ ಇರುಳುಗಣ್ಣಿಗೆ..
ಬಾರೆ ಚಂದ್ರಮೇ..
ಕತ್ತಲು ಕವಿದ
ನನ್ನ ಕಂಗಳಲಿ
ಬೆಳದಿಂಗಳಾಗಿ
ಅರಳು ಬಾರೆ
ಚಂದ್ರಿಮಾ
ನನಗಾಗಿ ಇಳಿದು ಬಾರೆ
ಚಂದ್ರಿಮೆ

ತಂಗಾಳಿ ಸಾಲು 2

ಎಲ್ಲಿ ನೋಡಿದರೂ
ಅಲ್ಲಲ್ಲೆ ಲತೆಗಳು
ಎತ್ತ ನೋಡಿದರೂ
ಗಿರಿ ಶಿಖರಗಳು
ಕಿರು ತೊರೆಗಳು
ಹರಿವ ನದಿಗಳು
ಸಿರಿ ಹಸಿರ
ಗಿಡ ಗಂಟೆಗಳು..
ಇಲ್ಲೆಲ್ಲಾ ನೀನೆ
ನೀನೇ.. ಸುಮೆ
ನೀನೇ ಇಲ್ಲೆಲ್ಲಾ..
ಇಲ್ಲಿಯ ಉಸಿರು ಉಸಿರಲು
ನಿನ್ನದೇ ಘಮ
ಸುಮೆ ಸುಮೀ…
ಚಿತ್ತ ಕಾಡುತಿದೆ
ಮತ್ತೇರಿಸುತಿದೆ
ಘಮಾ ಘಮ..
ಮತ್ತೆ ನೆನಪಾಗುತಿದೆ
ಸುಮಾ ಸುಮಾ ಕುಸುಮಾ…
ಇಲ್ಲಿಯೇ ಅಲ್ಲವೇನೇ
ನಮ್ಮಿಬ್ಬರ ಪ್ರಥಮ
ಸಮಾಗಮ…

‍ಲೇಖಕರು Admin

17 June, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading