ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನಗಿವತ್ತೂ ಚಂದ್ರದರ್ಶನವಾಗಿಲ್ಲ….

ದರ್ಶನ!

ಬಿ ಎಂ ಬಶೀರ್


ಇಫ್ತಾರಿನ ಹೆಸರಲ್ಲಿ
ಚೆಲ್ಲಿ ಹೋದ ಮೃಷ್ಟಾನ್ನದ ಅಗುಳುಗಳು
ಇನ್ನೂ ಮೋರಿಯಲ್ಲಿ ತೇಲುತ್ತಿವೆ
ಹಬ್ಬಕ್ಕೆಂದು ಕೊಂಡ
ಗರಿಗರಿಯಾದ ಹೊಸ ಕರವಸ್ತ್ರದಲ್ಲಿ
ಅಷ್ಟೂ ಕಣ್ಣುಗಳ ಕಣ್ಣೀರು ಹೇಗೆ ಒರೆಸಲಿ?
ನನ್ನ ಚೀಲದೊಳಗಿರುವ ಅಕ್ಕಿ
ನೆರೆಯವನ ಹಸಿವಿನ ಚೀಲ
ತುಂಬಲು ಸಾಲುತ್ತಿಲ್ಲ
ಹಸಿದವನು ರೊಟ್ಟಿಯ ಚೂರಿಗೆ
ತಡಕಾಡುವಂತೆ
ಕತ್ತಲು ಕವಿದ ಆಕಾಶದಲ್ಲಿ
ಚಂದಿರನ ಚೂರಿಗಾಗಿ ತಡಕಾಡುತ್ತಿರುವೆ
ನನಗಿವತ್ತೂ ಚಂದ್ರದರ್ಶನವಾಗಿಲ್ಲ….!!
 

‍ಲೇಖಕರು G

18 July, 2015

5 Comments

  1. Anonymous

    ಬಹಳ ಮಾರ್ಮಿಕವಾದ ಸಾಲುಗಳು.;ಮನಮುಟ್ಟಿತು.

  2. yash

    ಚೆಲ್ಲಿ ಹೋದ ಮೃಷ್ಟಾನ್ನದ ಅಗುಳುಗಳು
    ಇನ್ನೂ ಮೋರಿಯಲ್ಲಿ ತೇಲುತ್ತಿವೆ…. ಮನಮುಟ್ಟಿದ ಸಾಲು.

  3. mahesh kalal

    sir kavithe chennagide

  4. hajarat ali deginal

    ಹಸಿದ ಹೊಟ್ಟೆಗಳು ತುತ್ತು ಅನ್ನಕ್ಕಾಗಿ ಒದ್ದಾಡುವ ಈ ಸಮಯದಲ್ಲಿ ಅನ್ನವನ್ನು ಚಲ್ಲಾಡುತ್ತಿರುವ ಜನರಿಗೆ ನಿಮ್ಮ ಕವಿತೆ ಬಾರಕೋಲೇಟು ಕೊಡುತ್ತದೆ.ಬೇಂದ್ರೆಯವರ ಅನ್ನಯಜ್ಞ ಕವಿತೆಯ ಭಾವವೇ ನಿಮ್ಮ ಕವಿತೆಯಲ್ಲಿ ಹೊಸದಾಗಿ ಬಂದಿದೆ.ಧನ್ಯವಾದಗಳು ಬಶಿರ ಸರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading