
ಟ್ಯಾಗೋರ್ ಥಿಯೇಟರಿನ ಬಾಲ್ಕನಿಯಲ್ಲಿ
ಕರಿಯನೊಬ್ಬ ಕೂತಿದ್ದ
ಅವನ ಪಕ್ಕ ಒಬ್ಬ ಬಿಳಿಯ ಗಡ್ಡದ ಹಿರಿಯ ಕೂತ
ರಾಷ್ಟ್ರಗೀತೆ ನುಡಿಸುವಾಗ.
ಇಡಿಯ ಚಿತ್ರ ಮಂದಿರ ಎದ್ದು ನಿಂತಿತು
ಇವರಿಬ್ಬರು ಮಾತ್ರ ಕೂತಿದ್ದರು
ಕರಿಯ ಕೇಳಿದ ಬಿಳಿಗಡ್ಡದ ಹಿರಿಯನನ್ನು
“ನೀನ್ಯಾರೋಲೇ?”
ಸಂತನಂತಿದ್ದ ಹಿರಿಯ ನುಡಿದ
“ನಾನು ಟ್ಯಾಗೋರ್ ..ನೀನ್ಯಾರು?”
ಕರಿಯ ಉತ್ತರಿಸಿದ
“ನಾನು ಬಾಬ್ ಮಾರ್ಲೆ ಮತ್ತು
ನಾನು ಎದ್ದು ನಿಲ್ಲುವುದು
ನನ್ನ ಹಕ್ಕಿಗಾಗಿ ಮಾತ್ರ”
***
ಮೂಲ ಇಂಗ್ಲಿಷ್ : ರವಿ ಶಂಕರ್ ಎನ್, ಕೇರಳದ ಇಂಗ್ಲಿಷ್ ಕವಿ
ಕನ್ನಡಕ್ಕೆ: ಪ್ರತಿಭಾ ನಂದಕುಮಾರ್






0 Comments