ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಂದಿನಿ ಹೆದ್ದುರ್ಗ ಅವರ ಹೊಸ ಕವಿತೆ ‘ಕಳೆದು ಹೋಗಿರುತ್ತೇನೆ’

ನಂದಿನಿ ಹೆದ್ದುರ್ಗ

**

ಕಳೆದು ಹೋಗಿರುತ್ತೇನೆ

ಪ್ರೇಮದ ಹಾದಿಯಲ್ಲಿ

ಕಾಲದ ಒಂದು ಕಡು ಮುದ್ದಾದ ಕ್ಷಣ 

ಆವರಿಸಿಕೊಂಡು ನನ್ನ

ಇನ್ನು ಈ ಇವನಿಂದ ಮುಕ್ತಿ ಎಂದು 

ನಿರ್ಧಾರ ಮೂಡಿಸಿ

‘ಕಳೆದು ಹೋಗಿದ್ದ ನನಗೆ

ಮರಳಿ ನಾನೇ ಸಿಕ್ಕ ಖುಷಿ’

ಅದೂ ಯುಗಾಂತರದ ಒಂದು

ಘಳಿಗೆ

ಹೂವುದುರಿದ ಹೊತ್ತು

ನಕ್ಷತ್ರ‌ ಮಲಗಿದ ಕ್ಷಣ

ಮರ ಹಕ್ಕಿ ಮಾತು ಬಿಟ್ಟ ಕಾಲ

ತುಂಬಿಕೊಳ್ಳುತ್ತದೆ ಆಮಿಷದ ಅಮಲು

ತಪ್ಪಿಸುತ್ತದೆ ಹಾದಿ ಮತ್ತೆ

ಹೀಗೇ

ಈ ಹೊಣೆಗೇಡಿ ಪ್ರೇಮ 

ನನ್ನ ದಿಕ್ಕು ತಪ್ಪಿಸಿ ಅಲೆದಾಡಿಸಿದಾಗೆಲ್ಲ

ಒಂದು ಒದ್ದೆ ಮುತ್ತಿಗಾಗಿ 

ಹಂಬಲವೊಂದು ನಾಚಿಕೆಯಿಲ್ಲದೆ

ತುಳುಕಿ..

ಹಂಗಿನ‌ ಆತ್ಮಕ್ಕೆ ಅನವರತ

ಅಳುಕು ಎಂಬ

ಹೊಸ ಗಾದೆಗೆ 

ನಸುನಗುತ್ತೇನೆ ನಾನೇ

ಕಣ್ಣು ಮಂಜು ಮಂಜು

ಒಲವೆಂಬುದು ಹೀಗೇ

ಮಧುರ ನಂಜು

‍ಲೇಖಕರು Admin MM

13 April, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading