ಗ್ರೇಟ್..!

-ಬಿ ಆರ್ ಮಂಜುನಾಥ್

**

Dear Mangala,

I am typing this message so late in the night because I may not carry the same feeling after a night’s sleep. Tomorrow I may feel shy to express in the same way.

The show of Jayanth Kaikini’s play ‘Jategiruvanu Chandira’ was simply splendid. You and Huligappa were outstanding. That is not to belittle other artists. Acting, direction, stage craft and of course music were all of top notch quality. Dialogues, lyrics, the sense of humor and the story line all were matching each other. And most importantly the messaging at this crucial hour in the history of our country, was so very very important.

ನನ್ನ ಅನಿಸಿಕೆಯ ಪ್ರಕಾರ ನಾಟಕಗಳು ಅಥವಾ ಸಿನಿಮಾ ಸಹ ಬೌದ್ಧಿಕವಾಗಿ ತುಂಬಾ ಹೇಳಲು, ಚರ್ಚಿಸಲು ಪ್ರಯತ್ನಿಸಬಾರದು. ಹಾಗಂತ ಇವು ಅಗ್ಗದ ಮನರಂಜನೆಯ ಮಾಧ್ಯಮಗಳಲ್ಲ. ಆದರೆ ಮನರಂಜನೆ ಬಹಳ ಮುಖ್ಯವಾದ ವಾಹಕ. ಮತ್ತೆ ಯಾವುದೇ ಕಲಾ ಪ್ರಕಾರವಾದರೂ ಕೂಡ ಭಾವನಾತ್ಮಕವಾಗಿ ನಮ್ಮನ್ನು ತಟ್ಟಬೇಕು.

ನಾನು ಬೌದ್ಧಿಕ ಆಹಾರಕ್ಕಾಗಿ ವಿಚಾರ ಸಂಕಿರಣಕ್ಕೆ ಹೋದೇನು, ಪುಸ್ತಕ ಓದಿಯೇನು, ಬಲ್ಲವರೊಂದಿಗೆ ಚರ್ಚಿಸಿಯೇನು. ಆದರೆ ಎಲ್ಲ ಮನುಷ್ಯನಿಗೂ ಕೂಡ ಭಾವನಾತ್ಮಕ ಆಹಾರ ಬೇಕೇ ಬೇಕು. ಆ ಭಾವನೆಯ ವಾಹಕದ ಮೂಲಕವೇ ವಿಚಾರದ ದ್ವಾರಗಳು ತೆರೆದುಕೊಳ್ಳಬೇಕು. ಮುಸಲ್ಮಾನರು ನಮ್ಮವರು ಎಂಬುದನ್ನಾಗಲೀ, ದೇಶ ವಿಭಜನೆ ಒಂದು ದುರಂತ ಎನ್ನುವುದಾಗಲೀ, ಪ್ರೇಮದ ಸ್ವಾತಂತ್ರ ಜನ್ಮ ಸಿದ್ಧವಾದದ್ದು ಎಂಬುದಾಗಲೀ, ಲವ್ ಜಿಹಾದ್ ಒಂದು ದೊಡ್ಡ ಸುಳ್ಳು ಎಂಬುದಾಗಲೀ ಅದನ್ನು ನಾವು ಸಾವಿರ ಭಾಷಣ ಮಾಡಬಹುದು. ಆದರೆ ಒಂದು ನಾಟಕ, ಒಂದು ಸಿನಿಮಾ ಅದನ್ನು ಇದೆಲ್ಲಕ್ಕಿಂತಲೂ ಪ್ರಭಾವಶಾಲಿಯಾಗಿ ಮಾಡಬಹುದು. ನಿಮ್ಮ ನಾಟಕದ ಶಕ್ತಿ ಅಂಥದ್ದು.

ನನ್ನ ಸ್ವಭಾವವೇ ಭಾವಪೂರ್ಣವಾದದ್ದು. ತಾರ್ಕಿಕವಾಗಿರಲು ವೈಚಾರಿಕವಾಗಿ ಜ್ಞಾನವನ್ನು ಗಳಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತೇನೆ. ಆದರೆ ಬದುಕಿಗೆ ಹತ್ತಿರವಾದದ್ದನ್ನು ಹಾಗೂ ಉದಾತ್ತವಾದದ್ದನ್ನು ಕಂಡಾಗ ಮಾತ್ರ ನಾನು ನಾನಾಗಿ ಉಳಿದಿರುವುದಿಲ್ಲ. ನನ್ನ ಸಂಯಮದ ಕಟ್ಟೆ ಒಡೆದು ಹೋಗುತ್ತದೆ. ನಿಮ್ಮ ನಾಟಕದಲ್ಲಿ ನಾನು ಅದೆಷ್ಟು ಬಾರಿ ನಕ್ಕಿದ್ದೇನೋ, ಚಪ್ಪಾಳೆ ತಟ್ಟಿದ್ದೇನೋ, ಅದಕ್ಕಿಂತಲೂ ಹೆಚ್ಚಾಗಿ ಕಣ್ಣಲ್ಲಿ ನೀರು ತುಂಬಿಕೊಂಡಿದೆ, ಗಂಟಲಿನ ಸೆರೆ ಉಬ್ಬಿದೆ. ಇದಕ್ಕಿಂತ ಹೆಚ್ಚಿನದು ಏನು ಬೇಕು ಹೇಳಿ!!

ನಾನು ಸುಲಭವಾಗಿ ಯಾರಿಗೂ ಯಾವುದಕ್ಕೂ ‘ಗ್ರೇಟ್’ ಎಂಬ ವಿಶೇಷಣವನ್ನು ಉಪಯೋಗಿಸುವುದಿಲ್ಲ. ನಾನು ಸುಮಾರು 45 ವರ್ಷ ಕಾಲ ಪ್ರೌಢ ನಾಟಕಗಳನ್ನು ನೋಡಿದ್ದೇನೆ. ಅದರಲ್ಲಿ ನಾನು ನೋಡಿರುವ ಕೈಬೆರಳೆಣಿಕೆಯಷ್ಟು ಅತ್ಯಂತ ಹೃದಯಸ್ಪರ್ಶಿ ನಾಟಕಗಳಲ್ಲಿ ನಿಮ್ಮದು ಒಂದು. ಆದ್ದರಿಂದ ಇದನ್ನು ಗ್ರೇಟ್ ಎನ್ನುತ್ತೇನೆ.

ಇದನ್ನು ಸಾಧ್ಯವಾದರೆ ನಿಮ್ಮ ತಂಡದವರೊಂದಿಗೆ ಹಂಚಿಕೊಳ್ಳಿ. ಧನ್ಯವಾದ ಶುಭರಾತ್ರಿ!

‍ಲೇಖಕರು avadhi

April 15, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: