ಸಿದ್ರಾಮ್ ತಳವಾರ

ದೇವರು ಸತ್ತಿತ್ತಂತೆ!
ಸುದ್ದಿ ಕೇಳಿದ್ದೆ ತಡ ಕೇರಿಯಲ್ಲೆಲ್ಲ ಹಬ್ಬ
ಜತನವಾಗಿರಿಸಿದ ಆಯುಧ ಹೊರತೆಗೆದರು
ಕರಿಯ ಕೆಂಚ ಕಲ್ಲರೊಡಗೂಡಿ ಮಸೆಯುತಿದ್ದರು
ಕೊಂಚ ನಾಲಗೆ ಹರಿತಗೊಂಡು ನೀರೂರುತಿತ್ತು..
ಐನೋರ ಮನೆಯಲ್ಲಿ ಎತ್ತು ಸತ್ತ ಸೂತಕದ ಛಾಯೆ
ಹೊತ್ತೊಯ್ಯಲಾದೇಶ ಬಂದುದೇ ತಡ
ಕಾಲ್ಕಿತ್ತರೈವರೆಲ್ಲ ಹೊತ್ತು ದೂರದ ಗೈರಾಣಕ್ಕೆ,,,
ಸುದ್ದಿ ಮುಟ್ಟಿರಬಹುದು ಅನಿಸಿದೆ ನಮಗೂ ಮುಂಚೆ
ರಭಸದಲೆ ಗರಿಬಿಚ್ಚಿ ಹಾರಾಡುತಿವೆ ಹದ್ದುಗಳು
ಮೊದಲು ನಮಗೆ ನಂತರ ಅವಕೆ..

ಹೀಗೆ ನೋಡುತಲೆ ಪಾಲು ಮಾಡಿಕೊಂಡರು
ದೇವರ ಕೊಯ್ದು ಕರಿಯ ಕೆಂಚರಿಗಿಷ್ಟು ಭೀಮಪಾಲು
ಚಿಂತೆಯಿಲ್ಲ ವಾರಪೂರ್ತಿ ಭೂರಿ ಭೋಜನ..
ಕೇರಿಯಲಿ ಒಲೆಯುರಿಸಿ ವಾರಗಳೇ ಕಳೆದಿರಬಹುದು
ಮತ್ತೇ ದೇವರು ಕರುಣಿಸಿದ ಈಗ ಹೊಗೆ ಕಾಣುತಿದೆ
ಕೇರಿಯಂಗಳದಲ್ಲೆಲ್ಲ ದೇವರ ಹೆಣದ್ದೇ ಮಾತು..
ಕೇರಿಯಲಿ ನಾಲ್ಕಾರು ದಿನ ಹಬ್ಬದ ಸಡಗರ
ತುಂಬಿದ ಉದರ ಇಂದಿಗಿಷ್ಟು ಸಾಕು ಮತ್ತೇ
ಕಣ್ಣರಳಿಸಿ ಕಾಯುತಲಿವೆ ಅದಕ್ಕೆ ದೇವರ ಹೆಣಕ್ಕೆ..






ಧನ್ಯವಾದಗಳು ಅವಧಿ ತಂಡಕ್ಕೆ….
ಸಿದ್ದರಾಮ…
e kavana dalithara vycharica prajnegeyannu jagruta golisuvudara badalu, ennastu hindakke duduvudara bagge chintisuvanante kanuttide viparysä allave ?
e kavana dalithara vycharica prajneyannu jagrutgolisuvadara badalu,ennastu hindakke duduvudara bagge chintisuvarante kanuttide, viparyasa allave?