ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ದುಃಖದ ಲೆಕ್ಕವಿಡಬಹುದು ಲೆಕ್ಕವಿಲ್ಲ ಸುಖಕ್ಕೆ' – ಟಿ ಎಸ್ ಗೊರವರ ಕವಿತೆ

ತುತ್ತಿನ ಆಟ

– ಟಿ ಎಸ್ ಗೊರವರ

ನಾವಿಬ್ಬರೂ ಒಂದೇ ಗಂಗಾಳದಲಿ
ಹಂಚಿ ತಿಂದೆವು ತುತ್ತು ;
ಪ್ರೇಮವನೇ ಹಂಚಿ ತಿಂದಂತೆ
 
ತುತ್ತಿನಲಿ ಸುಖ, ಮುದ
ಒಮ್ಮೆಗೇ ಮೇಳೈಸಿ
ತುತ್ತಿನ ಲೆಕ್ಕವೇ ಮರೆತು ಹೋಯ್ತು

ಯಾವ ತುತ್ತು ತಿಂದರೂ
ತುಟಿ ಮುತ್ತಿನ ಸವಿ ನೆನಪಾಗಿ
ತಿಂದದ್ದೇ ತಿಂದದ್ದು !
 
ದುಃಖದ ಲೆಕ್ಕವಿಡಬಹುದು
ಲೆಕ್ಕವಿಲ್ಲ ಸುಖಕ್ಕೆ ;
ಎದೆಗಿಳಿದಂತೆ ತುತ್ತು
ಕರಗಿ ಹೋಯ್ತು ಎದೆಯ ದುಃಖ
 

‍ಲೇಖಕರು G

31 July, 2015

6 Comments

  1. hari prasad

    lovely

  2. savitri

    Chennagide sir.

  3. ಮಂಜುನಾಥ್. ಪಿ

    ಸುಂದರ ಕವಿತೆ…!

  4. mmshaik

    very nice poem.

  5. Anonymous

    Nannadu 89 neya “LIKE”

  6. hajarat ali deginal

    kavita chand baradeeri

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading