-ಎಂ ಎಸ್ ಪ್ರಕಾಶ್ ಬಾಬು
ದುಂಬಿಗಳೂ ಮತ್ತು ನೊಣಗಳೂ
ಪಾಕಿಸ್ತಾನಿ ಗಾಯಕನೊಬ್ಬ
ದುಂಬಿಗಳ ಬಗ್ಗೆ
ಹೇಳಿದ ಸಾಲುಗಳು
ನನ್ನ ಕಿವಿಯೊಳಗೆ
ಗುಯ್ ಗುಯ್
ಗುಯ್ ಗುಟ್ಟುತ್ತಲೇ
ಇದ್ದವು
ಒಮ್ಮೆ ನೊಣಗಳೆಲ್ಲಾ ಸೇರಿ
ದುಂಬಿಗಳ ರಾಜನಲ್ಲಿಗೆ
ಬಂದು
ನಮಗೂ ರೆಕ್ಕೆಗಳಿವೆ
ನಾವೂ ಹಾರ ಬಲ್ಲೆವು
ಅದ್ಯಾಕೆ ತಾರತಮ್ಯ?
ನಮಗೂ ಬೇಕು
ನಿಮ್ಮಂತೆ ಪ್ರಾಮುಖ್ಯತೆ
ಅಂದವು
ರಾಜ ನಕ್ಕು ಹೇಳಿದ
ಹೋ.. ಅದಕ್ಕೇನಂತೆ
ಹೋಗಿ, ಬೆಳಕನುಡುಕಿ
ದುಂಬಿಗಳ ಕೆಲಸ ಬೆಳಕನುಡುಕುವುದು
ಬೆಳಕನರಸಿ ಹೊರಟವು
ನೊಣಗಳು
ಬೆಳಕನುಡುಕಿ ಹುಡುಕಿ
ತಿರು ತಿರುಕಿ ಬಂದವು
ನೊಣಗಳು
ಬಂದ ನೊಣಗಳು
ಇತ್ತವು ರಾಜನಿಗೆ
ವರದಿಯನ್ನ;
ಬೆಳಕು ಅಲ್ಲಿ ಅಲ್ಲಿದೆ
ಬೆಳಕು ಇಲ್ಲಿ ಇಲ್ಲಿದೆ
ಬೆಂಕಿ ಅಲ್ಲಿದೆ
ಪೈರು ಇಲ್ಲಿದೆ
ಗಾಳಿ ಎಲ್ಲೆಲ್ಲೂ ಇದೆ
ಎಂದು ಹೇಳಿ
ಒಂದು ಸುತ್ತ ಸುತ್ತಿ
ಗುಯ್ ಗುಯ್ ಗುಟ್ಟಿ
ಕುಳಿತುಕೊಂಡವು
ಕುಳಿತುಕೊಂಡು
ರಾಜನ ಕೇಳಿದವು
ಹೇ.. ರಾಜನೇ ಈಗ ಹೇಳು
ನಿನ್ನ ನಿರ್ಧಾರವ
ರಾಜ ಹೇಳಿದ
ಏನು ನಿರ್ಧಾರ?
ಒಕ್ಕೊರಳಿನಿಂದ ನೊಣಗಳು
ಹೇಳಿದವು
ತಿರುಗಿ ಬರಲಿ ದುಂಬಿಗಳು
ಆಗ ತಿಳಿತದೆ, ನಾವು ಗೆದ್ದೆವೋ
ಅಥವಾ ಅವು ಗೆದ್ದವೋ
ಎಂದು
ರಾಜನಂದ;
ಹೋ.. ಮರುಳೇ
ಅದನು
ಆಗಲೇ ನಿರ್ಧರಿಸಿ ಆಗಿದೆ
ನೊಣಗಳೆಲ್ಲಾ ಸೇರಿ
ಒಕ್ಕೊರಳಿನಿಂದ ಕೇಳಿದವು
ಏನು?!!
ರಾಜನಂದ;
ಯಾರು ಬೆಳಕ
ಕಾಣುವರೋ
ಅವರೇಕೆ ಹಿಂದಿರುಗುವರು?
ಬೆಳಕನ್ಯಾರು ಕಾಣುವರೋ
ಅವರು ಅದರಲ್ಲೇ
ಲೀನವಾಗುವರು
ತಿರುಗಿ ಬಾರಲಾರರು
ಅವರು ಮತ್ತೆ
ನಿಮ್ಮ ಹಾಗೆ.






ಯಾರು ಬೆಳಕ
ಕಾಣುವರೋ
ಅವರೇಕೆ ಹಿಂದಿರುಗುವರು?
ಬೆಳಕನ್ಯಾರು ಕಾಣುವರೋ
ಅವರು ಅದರಲ್ಲೇ
ಲೀನವಾಗುವರು
ತಿರುಗಿ ಬಾರಲಾರರು
ಅವರು ಮತ್ತೆ
ನಿಮ್ಮ ಹಾಗೆ.
lovely….