ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೀಪ ಹಚ್ಚಿಟ್ಟ ರಾತ್ರಿಯೂ ನಿನ್ನೆಯಂತೆ …..

-ಲಡಾಯಿ ಬಸು

ಸಾಲು ದೀಪ ಹಚ್ಚಿಟ್ಟ
ದೀಪಾವಳಿ ರಾತ್ರಿಯೂ
ಬೀದಿದೀಪದ ಕೆಳಗೆ ಮಲಗಿದ
ಗಾಯಗಳು
ರೈಲು ಸಿಳ್ಳಿಗೆ ಬಿಚ್ಚಿಬೀಳುವ
ಸುಖದ ಮುಲಗು
ಎತ್ತರದ ಗೋಡೆಗಳು
ಆಳದ ಕಂದರಗಳು
ಬಯಲ ತುಂಬಿದ ಮುಳ್ಳುಬೇಲಿಗೆ
ಸಿಗೆಬಿದ್ದ ಹರಿದ  ಸೆರಗು
ಹೆಜ್ಜೆಗಳ ಮೇಲೆ ಹೆಜ್ಜೆಯೂರುವ
ಸದ್ದು
ಮನುಷ್ಯ ಶವಗಳ ಹುಡುಕುತ್ತ
ಅಲೆವ ರಣಹದ್ದುಗಳು
ಸ್ಪರ್ಶಜ್ಞಾನವಿಲ್ಲದೆ
ಬಿದ್ದ ಅಂಗಾಂಗಗಳು
ಒಂದು ಶವದಿಂದ ಇನ್ನೊಂದು ಶವ
ಬರುವರೆಗೆ
ಉರಿವ ಸ್ಮಶಾನದ ಹಣತೆ
ಇನ್ನೊದು ಹಣತೆ ಹಚ್ಚುತ್ತಿದೆ
ದು:ಖಿಸುತ್ತ …. 
ದೀಪಗಳ ಹಚ್ಚಿಟ್ಟ
ಈ ರಾತ್ರಿಯೂ
ಬೆಳಕನ್ನೇ ಕುಡಿಯುತ್ತ
ಮಲಗಿದೆ ನಿನ್ನೆಯಂತೆ ..!


‍ಲೇಖಕರು Admin

10 November, 2015

1 Comment

  1. suresh rajamane, rannabelagali

    suuuuperr sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading