ದೀಪವು ನಿನ್ನದೆ, ಗಾಳಿಯು ನಿನ್ನದೆ…

satish patil

ಸತೀಶ ಪಾಟೀಲ್, ಕೊಟ್ಟೂರು

 

ಅದೊಂದು ಕತ್ತಲ ಸಾಮ್ರಾಜ್ಯ…. ಆ ರಾಜ್ಯದ ತುಂಬಾ ಎಲ್ಲೆಲ್ಲೂ ಕತ್ತಲು… ಅಲ್ಲಿ ಕತ್ತಲ ದೊರೆಯದೇ ದಬರ್ಾರ್….

ಅದೆಲ್ಲಿತ್ತೊ ಏನೊ.. ಒಂದು ಪುಟ್ಟ ಕಿರಣ… ಅತೀ ಚಿಕ್ಕ ಕಿರಣ ಈ ಕತ್ತಲ ಸಾಮ್ರಾಜ್ಯಕ್ಕೆ ಎಂಟ್ರಿ ಆಯ್ತು….

ಅಷ್ಟೇ….. !

ಕತ್ತಲ ಸಾಮ್ರಾಜ್ಯದ ಚಿತ್ರಣವೇ ಬದಲಾಯಿತು…

ಕಿರಣ ಎಲ್ಲೆಲ್ಲಿ ಹೊಗುತ್ತೊ.. ಅಲ್ಲೆಲ್ಲಾ ಬೆಳಕು ಬೀರಲಾರಂಭಿಸಿತು….

ಕತ್ತಲ ದೊರೆಗೆ ಮೊದಲ ಬಾರಿಗೆ ದಿಗಿಲಾಯಿತು… ತನ್ನ ರಾಜ್ಯದಲ್ಲಿ ಬೆಳಕು ಬೀರುತ್ತಿರುವ ಬಗ್ಗೆ ಅಸಮಧಾನ ಉಂಟಾಯಿತು…

ಅಷ್ಟರಲ್ಲಾಗಲೇ ಕಿರಣದ ಶಕ್ತಿ ಬೆಳೆಯುತ್ತಾ ಬಂದಿತ್ತು…. ಈ ಕಿರಣವೂ ತುಂಬಾ ಕಿಲಾಡಿ…

ಒಂದು ದಿನ ಕತ್ತಲ ರಾಜನನ್ನು ನೋಡಲು ಅರಮನೆಗೇ ತೆರಳಿತು…

ಇದುವರೆಗೂ ಕಿರಣ ತಿರುಗಾಡಿದ ಸ್ಥಳವೆಲ್ಲಾ ಬೆಳಕಾಗಿತ್ತು…

ಅರಮನೆಯಲ್ಲೂ ಬೆಳಕು ಮೂಡಿಸುವ ಆಸೆ ಆ ಕಿರಣದ್ದು……

ಕಿರಣ ಅರಮನೆಗೆ ಬರುವ ಸುದ್ದಿ ತಿಳಿದ ಕತ್ತಲ ರಾಜ, ಗೊತ್ತಾಗದಂತೆ ಅಡಗಿಕೊಂಡ…

ಕಿಲಾಡಿ ಕಿರಣ ಅದನ್ನು ಪತ್ತೆ ಹಚ್ಚಿತು… ಈಗ ಕಿರಣನಿಗೆ ಹೆದರಿದ ಕತ್ತಲ ರಾಜ ಓಡಲಾರಂಭಿಸಿದ….

2036702805_8a845a730eಕಿರಣ, ರಾಜನನ್ನು ಹಿಂಬಾಲಿಸಲಾರಂಭಿಸಿತು… ಕಿರಣ ಹಿಂಬಾಲಿಸಿದ ಸ್ಥಳವೆಲ್ಲಾ ಬೆಳಕಾಯಿತು…

ಮತ್ತು ಓಡಿದಂತೆ ಅದರ ಶಕ್ತಿ ಹೆಚ್ಚಾಗುತ್ತಾ ಬಂತು…. ಕತ್ತಲ ದೊರೆ ಓಡಿದಂತೆಲ್ಲಾ ಸುಸ್ತಾಗತೊಡಗಿದ…

ದೊರೆ ಮರವೇರಿದ.. ಕಿರಣ ಅಲ್ಲಿಗೂ ಬಂತು… ಗುಹೆ ಸೇರಿದ, ಅಲ್ಲಿಯೂ ಕಿರಣ ಹಾಜರ್…

ಹಾಗೆ ಓಡುತ್ತಾ ಓಡುತ್ತಾ ಕತ್ತಲ ರಾಜ ಸೋಲುವ ಸ್ಥಿತಿ ತಲುಪಿದ…

ಇನ್ನೇನು ಕತ್ತಲು ಸಂಪೂರ್ಣ ಪರಾಜಯ ಹೊಂದಬೇಕು ಅನ್ನುವಷ್ಟರಲ್ಲಿ…

ಅಲ್ಲೊಬ್ಬ ಮನುಷ್ಯ ನಿದ್ದೆಯಿಂದ ಆಕಳಿಸುತ್ತಿದ್ದ ಅಷ್ಟೇ….

ಕತ್ತಲ ದೊರೆ ಮನುಷ್ಯನ ಬಾಯಲ್ಲಿ ಹೋದ….

ಇನ್ನೇನು ಕಿರಣವೂ ಮನುಷ್ಯನ ಬಾಯಲ್ಲಿ ಎಂಟ್ರಿ ಆಗಬೇಕು ಅನ್ನುವಷ್ಟರಲ್ಲಿ

ಆ ವ್ಯಕ್ತಿ ಬಾಯಿ ಮುಚ್ಚಿದ…

ಕತ್ತಲ ದೊರೆ ಮನುಷ್ಯನ ಬಾಯಿ ಮೂಲಕ ಹಾದು ಹೃದಯ ಸೇರಿದ…

ಮನುಷ್ಯನ ಹೃದಯ ಪ್ರವೇಶಿಸುವುದು ತಿಳಿಯದೇ ಕಿರಣ ಅಲ್ಲೇ ಸುತ್ತಲಾರಂಭಿಸಿತು…..

ಕತ್ತಲು ನಮ್ಮ ಹೃದಯ ಪ್ರವೇಶಿಸಿ ಸಾವಿರಾರು ವರ್ಷಗಳಾಗಿವೆ….

ಇನ್ನು ನಮ್ಮೊಳಗಿನ ಅಂಧಕಾರ ಹೊಗಿಲ್ಲ… ಜಗತ್ತಿನ ಎಲ್ಲರ ಹೃದಯದೊಳಗೆ ಜ್ನಾನದ

ಜ್ಯೋತಿ ಹಚ್ಚುತ್ತೇನೆಂದ ಸ್ವಾಮೀಜಿಗಳು, ಧರ್ಮಗುರುಗಳು, ತತ್ವಜ್ನಾನಿಗಳು ಸೋತು ಹೋಗಿದ್ದಾರೆ….

ಜಗತ್ತನ್ನು ತಿಳಿಗೊಳಿಸುತ್ತೇವೆ ಎಂದು ಹೇಳುವ ಇವರು, ಅದನ್ನು ಇನ್ನಷ್ಟು ಕಲಕುತ್ತಿದ್ದಾರೆ…

ಧರ್ಮದ ಹೆಸರಲ್ಲಿ, ಜಾತಿಯ ಹೆಸರಲ್ಲಿ ಮನುಷ್ಯ, ಮನುಷ್ಯರನ್ನೇ ಬೇಟೆಯಾಡುತ್ತಿದ್ದಾನೆ…..

ಹೆಚ್ಚೇನು ಹೇಳಲಾರೆ….

ನಾವು ನಮ್ಮೊಳಗೆ ಹಣತೆ ಹಚ್ಚೋಣ….

ಆ ಬೆಳಕಿನಡಿಯಲ್ಲಿ ಜಾತಿ-ಮತ, ಬಡವ-ಶ್ರೀಮಂತ ಯಾವುದೇ ಬೇಧವಿಲ್ಲದ

ಜಗತ್ತನ್ನು ನಿರ್ಮಿಸೋಣ…..

ಆ ಮೂಲಕ ನಮ್ಮೊಳಗಿನ ಕತ್ತಲು ಓಡಿಸೋಣ….

ಈ ದೀಪಾವಳಿ ಅಂತಹದ್ದೊಂದು ಅವಕಾಶಕ್ಕೆ ಕಾರಣವಾಗಲಿ….

ನಿಮಗೆ, ನಿಮ್ಮ, ಬಂಧುಗಳಿಗೆ, ಗೆಳೆಯ-ಗೆಳತಿಯರಿಗೆ

ದೀಪಾವಳಿ ಹಬ್ಬದ ಶುಭಾಶಯಗಳು……

ದೀಪವು ನಿನ್ನದೆ, ಗಾಳಿಯು ನಿನ್ನದೆ…

ಆರದಿರಲಿ ಬೆಳಕು…

ಹಡಗು ನಿನ್ನದೆ, ಕಡಲು ನಿನ್ನದೆ…

ಮುಳುಗದಿರಲಿ ಬದುಕು…

(ಓಶೋ ರಜನೀಶ್ ಬರಹದಿಂದ ಕದ್ದ ಕತೆ)

‍ಲೇಖಕರು Admin

November 10, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: