ಮತ್ಸಗಂಧಿ ಎಕ್ಸ್ ಪ್ರೆಸ್ ಬರುತ್ತಾ ಇದೆ

ಚಲ್ ..ಚೈಯಾ ಚೈ0ಯಾ

ashish marali

ಆಶೀಶ್ ಮರಾಳಿ 
……………..
ಇನ್ನೂ ಬೆಳಕಾಗದ ಊರಿನ ರೈಲು ನಿಲ್ದಾಣದ ಸ್ಟೇಷನ್
ಮಾಸ್ಟರ್ ರೂಮಿನಲ್ಲಿ ಸಣ್ಣಗಿನ ದನಿಯಲ್ಲಿ ಮೊಬೈಲ್
ನಿಂದ ಚಲ್ ಚೈಂಯಾ ಚಂಯಾ ಹಾಡು ……

train journeyಹೊರಗೆ ತುಕ್ಕು ಹಿಡಿದ ಭೋಗಿಯಲ್ಲಿ ಭಿಕ್ಷುಕ ನೊಬ್ಬ ಕುಳಿತಸ್ಥಿತಿಯಲ್ಲೇ ನಿದ್ದೇ ಹೋಗಿದ್ದಾನೆ …. ಹರಿದ ಐದು
ರೂಪಾಯಿಯ ನೋಟು ಮಾಸಲು ಅಂಗಿಯ ಕಿಸೆಯಿಂದ
ಅರ್ಧ ಕಾಣುತಿದೆ ….

ಮಂಕಿ ಕ್ಯಾಪ್ ತೊಟ್ಟು
ಈಗಷ್ಟೇ ನೈಟ್ ಡ್ಯೂಟಿ ಮುಗಿಯ ಬೇಕಾಗಿರವ ಪೋಲಿಸಣ್ಣನಿಗೆ ಹಬ್ಬಕ್ಕೆ ರಜೆ ಇಲ್ಲ …screen saver ನ photo
ನೋಡಿ ಮಗಳು ನೆನಪಾಗಿ ಬಿಟ್ಟಿದ್ದಾಳೆ .. .

. ಯಾರೋ ಪಕೋಡ ತಿಂದು ಎಸೆದ ಹಳೇ ಪೇಪರ್ ನಲ್ಲಿ
ಒಂದು ಕಡೆ ಗೌಡರ ಬೋಳು ತಲೆ ಮತ್ತೊಂದು ಕಡೆ
ಇಂದುಲೇಖ ಹೇರ್ ಆಯಿಲ್ ನ ಚಿತ್ರ….ರದ್ದಿ ಆಯುವ
ಹುಡುಗಿಯ ಚೀಲ ಸೇರಿ ಬಿಟ್ಟಿದೆ …..

ಫ್ಲಾಟ್ ಫಾರಂ ನಲ್ಲಿ
ದಿನಪತ್ರಿಕೆ ಜೋಡಿಸಿ ಕೊಳ್ಳುತ್ತಿರವ ಹುಡುಗ ಒಳ
ಉಡುಪಿನ ಜಾಹಿರಾತಿನ ಹುಡುಗಿಯ ಚಿತ್ರ ನೋಡುತ್ತಾ
ಮರಾಠಿ ದಿನಪತ್ರಿಕೆ ಒಳಗೆ ಕನ್ನಡ ಪ್ರಭದ
ಕಾಸರಗೋಡು ಕುರಿತ ವಿಶೇಷ ಪುರವಣಿ ಪುಟ
ಸೇರಿಸಿ ಬಿಟ್ಟಿದ್ದಾನೆ ….. ಉದ್ದ ಗುಂಗುರು ಕೂದಲಿನ
ಬಿಳಿ ತಿಲಕದ ಹುಡಗಿಗೆ ಮಲಯಾಳಂ ಮನೋರಮಾ
ಕೊಳ್ಳಬೇಕು ,… ಚಿಲ್ಲರೆ ಇಲ್ಲ ಹುಡುಕುತಿದ್ದಾಳೆ ….
ಕ್ಯಾಂಟೀನ್ ಕಾಫಿ ಪರಿಮಳಕ್ಕೆ ,ತಾಯಿ ತೊಡೆ ಮೇಲೆ

ಕುಳಿತ ಮಗುವಿಗೆ ….ಆಕ್ಷೀ …..ಆಕ್ಷೀ …..

ಸಿದ್ದಿವಿನಾಯಕನ ಗುಡಿಯ ಮೈಕ್ ನಿಂದ …

ಗಜಮುಖನೇ ಗಣಪತಿಯೇ ….

ಈ ಕಡೇ ಜುಮ್ಮಾ ಮಸೀದಿಯಿಂದ ಅಲ್ಲಾ ಹೋ ಅಕ್ಬರ್

ಇನ್ನೇನು ಇಷ್ಟರಲ್ಲೇ ಬೆಳಕಾಗ ಬಹುದು …

ಹಳೇ ಭೋಗಿಯ ಒಳಗಿನ ಭಿಕ್ಷುಕ ಇಷ್ಟೇಲ್ಲಾ ಜನರಿಗೆ

ವಾಸ್ತವ ತೋರಿಸ ಬಹುದು … ಸ್ವಲ್ಪ ಹೊತ್ತು ಕಾಯಿರಿ

ಮತ್ಸಗಂಧಿ ಎಕ್ಸ್ ಪ್ರೆಸ್ ಬರುತ್ತಾ ಇದೆ

‍ಲೇಖಕರು admin

November 10, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: